Wednesday, August 10, 2022

Latest Posts

ಕೇರಳದ ಸಚಿವ, ಶಾಸಕ ರಾಜೀನಾಮೆ ಆಗ್ರಹಿಸಿ ಪ್ರಬಲ ಹೋರಾಟ: ಕಾಸರಗೋಡಿನಲ್ಲಿ ಪ್ರತಿಭಟನಾ ಸಂಗಮ ಉದ್ಘಾಟನೆ

ಕಾಸರಗೋಡು: ಚಿನ್ನ‌ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಉನ್ನತ ಶಿಕ್ಷಣ ಇಲಾಖೆ ಸಚಿವ ಕೆ.ಟಿ.ಜಲೀಲ್ ಮತ್ತು ಚಿನ್ನಾಭರಣ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಎನ್‌ಡಿಎ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಬೃಹತ್ ಪ್ರತಿಭಟನಾ ಸಂಗಮ ನಡೆಯಿತು.
ಬಿಜೆಪಿ ಹಾಗೂ ಎನ್‌ಡಿಎ ಕೇರಳ ರಾಜ್ಯಾಧ್ಯಕ್ಷರಾದ ಕೆ.ಸುರೇಂದ್ರನ್ ಪ್ರತಿಭಟನೆಯನ್ನು ಉದ್ಘಾಟಿಸಿ, ಮುಖ್ಯ ಭಾಷಣ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಸಹಿತ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು. ಅಲ್ಲದೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ನೇತಾರರು ಪಾಲ್ಗೊಂಡಿದ್ದರು.
ಸಚಿವ ಕೆ.ಟಿ.ಜಲೀಲ್ ಮತ್ತು ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಸಹ ಸಂಘಟನೆಗಳು ಹಾಗೂ ಎನ್‌ಡಿಎ ನೇತೃತ್ವದಲ್ಲಿ ಪ್ರಬಲ ಪ್ರತಿಭಟನೆಗೆ ನಾಂದಿ ಹಾಡಲಾಯಿತು. ಜಿಲ್ಲೆಯಲ್ಲಿ ಸಿಪಿಎಂ ಮತ್ತು ಮುಸ್ಲಿಂಲೀಗ್ ವಿರುದ್ಧ ಪ್ರಬಲ ಆಂದೋಲನ ಸಂಘಟಿಸಲು ಎನ್‌ಡಿಎ ಮುಖಂಡರು ಪ್ರತಿಜ್ಞೆ ತೊಟ್ಟರು. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಪ್ರತಿಭಟನಾ ಸಂಗಮ ಉದ್ಘಾಟಿಸುವುದರೊಂದಿಗೆ‌ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನಾ ಅಭಿಯಾನ ಆರಂಭಗೊಂಡಿತು.
ದೇಶದ್ರೋಹದ ಹೆಸರಿನಲ್ಲಿ ತನಿಖೆಗೆ ಹಾಜರಾದ ಸಚಿವ ಕೆ.ಟಿ.ಜಲೀಲ್ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವ ವರೆಗೆ ಬಿಜೆಪಿ ಮತ್ತು ಎನ್ ಡಿಎ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಎನ್ ಡಿಎ ನೇತಾರರು ‘ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss