Thursday, August 18, 2022

Latest Posts

ಕೇರಳದ 133 ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಣೆಗೆ ಸಿದ್ಧತೆ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಮೊದಲ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಿಸುವ ಎಲ್ಲಾ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ 133 ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ವ್ಯಾಕ್ಸಿನ್ ವಿತರಿಸಲಾಗುವುದು. ಈ ಕೇಂದ್ರಗಳಲ್ಲಿ ಅಗತ್ಯದ ಸಿದ್ದತೆಗಳನ್ನು ಏರ್ಪಡಿಸಲಾಗಿದೆ. ವೆಬ್‌ಕಾಸ್ಟಿಂಗ್‌ನ ಹೊರತು ಎರ್ನಾಕುಳಂ ಜಿಲ್ಲಾಸ್ಪತ್ರೆ , ಪಾರಶಾಲೆ ತಾಲೂಕು ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಣೆಯ ಉದ್ಘಾಟನೆ ದಿನದಂದು ಟು ವೇ ಕಮ್ಯೂನಿಕೇಶನ್ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ರಾಜ್ಯ ಆರೋಗ್ಯ ಇಲಾಖೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಒಂದು ಕೇಂದ್ರದಲ್ಲಿ ಒಂದು ದಿನ ನೂರು ಮಂದಿಗೆ ವ್ಯಾಕ್ಸಿನ್ ನೀಡಲಾಗುವ ರೀತಿಯಲ್ಲಿ ತಯಾರು ನಡೆಸಲಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ಇದುವರೆಗೆ 3,59,549 ಮಂದಿ ಹೆಸರು ನೋಂದಾಯಿಸಿದ್ದಾರೆ. ಸರಕಾರಿ ವಲಯದಲ್ಲಿ 1,69,150 ಮಂದಿ ಹಾಗೂ ಖಾಸಗಿ ವಲಯದಲ್ಲಿ 1,90,399 ಮಂದಿ ಇದರಲ್ಲಿ ಸೇರಿದ್ದಾರೆ. ವ್ಯಾಕ್ಸಿನ್ ವಿತರಣೆಗಾಗಿ ಎರ್ನಾಕುಳಂನಲ್ಲಿ 12, ಕಲ್ಲಿಕೋಟೆ ಮತ್ತು ತಿರುವನಂತಪುರದಲ್ಲಿ ತಲಾ 11 ಕೇಂದ್ರಗಳು ಅಲ್ಲದೆ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಇತರ 11 ಜಿಲ್ಲೆಗಳಲ್ಲಿ ತಲಾ 9 ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವೆ ವಿವರಣೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!