Tuesday, July 5, 2022

Latest Posts

ಕೇರಳ-ಕರ್ನಾಟಕ ‘ಕೊರೋನಾ ಗಡಿ’ ವಿವಾದ : ಚರ್ಚಿಸಿ ನಿರ್ಧರಿಸಿ ಎಂದ ಸುಪ್ರೀಂ

ಹೊಸದಿಲ್ಲಿ :ಕೊರೋನಾ ವೈರಾಣು ಹರಡುವಿಕೆ ತಡೆಗಾಗಿ ದೇಶವು ಸಂಪೂರ್ಣ ಲಾಕ್‌ಡೌನ್ ಆಗಿರುವ ಸಂದರ್ಭ , ಕೊರೋನಾ ಪ್ರಕರಣಗಳು ಒಂದೇ ಸವನೆ ಹೆಚ್ಚುತ್ತಿರುವ ಕೇರಳದೊಂದಿಗಿನ ತನ್ನ ಗಡಿಯನ್ನು ಕರ್ನಾಟಕ ಬಂದ್ ಮಾಡಿದ್ದು, ಈ ವಿವಾದವನ್ನು ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ತೀರ್ಮಾನವೊಂದಕ್ಕೆ ಬರುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಿಗೆ ಸುಪ್ರೀಂಕೋರ್ಟ್‌ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಏ.7ಕ್ಕೆ ನಿಗದಿಗೊಳಿಸಿದೆ.
ಕೇರಳದಿಂದ ಕೊರೋನಾ ಹೆಮ್ಮಾರಿ ಕರ್ನಾಟಕದ ಜಿಲ್ಲೆಗಳಿಗೂ ಹರಡುವುದನ್ನು ತಡೆಗಟ್ಟುವ ಜನಹಿತ ದೃಷ್ಟಿಯಿಂದ ಕರ್ನಾಟಕವು ಕೇರಳದೊಂದಿಗಿರುವ ತನ್ನ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಲನ್ನು ಏರಲಾಗಿತ್ತು. ಕರ್ನಾಟಕವು ಕೇರಳ -ಕರ್ನಾಟಕ ಗಡಿಯನ್ನು ತುರ್ತು ಅಗತ್ಯಗಳಿಗೆ ಮುಕ್ತಗೊಳಿಸಬೇಕು ಎಂದು ಕೇರಳದ ಉಚ್ಚ ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಕೇರಳ-ಕರ್ನಾಟಕ ಗಡಿ ವಿವಾದ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಜನ ಸಂಚಾರಕ್ಕಾಗಿ ಹೇಗೆ ಅನುಕೂಲ ಕಲ್ಪಿಸಬೇಕು ಎಂದು ತೀರ್ಮಾನಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.ಪ್ರಕರಣದ ಮುಂದಿನ ವಿಚಾರಣೆಯನ್ನು ಏ.೭ಕೆ ನಿಗದಿಪಡಿಸಲಾಗಿದೆ.ಹಾಗೆಯೇ ಮುಂದಿನ ವಿಚಾರಣೆಯ ವೇಳೆ,ಕೇರಳ ಉಚ್ಚ ನ್ಯಾಯಾಲಯಕ್ಕೆ ಈ ವಿಷಯದಲ್ಲಿ ನಿರ್ದೇಶನ ನೀಡುವ ವ್ಯಾಪ್ತಿ ಇದೆಯೇ ಎಂಬ ಕುರಿತಂತೆಯೂ ಸರ್ವೋಚ್ಚ ನ್ಯಾಯಾಲಯ ನಿಲುವೊಂದನ್ನು ವ್ಯಕ್ತಪಡಿಸಬಹುದೆಂದು ನಿರೀಕ್ಷಿಸಲಾಗಿದೆ.
ವಿಶೇಷವಾಗಿ ಕರ್ನಾಟಕದ ಗಡಿ ಭಾಗಗಳಾದ ತಲಪಾಡಿ ಸಹಿತ ಕೊಡಗಿನ ಕೆಲವು ಭಾಗಗಳ ಮೂಲಕ ಕೇರಳದಿಂದ ಬರಲು ಅವಕಾಶವಿದ್ದು, ಕೊರೋನಾ ಪಿಡುಗು ಮಾರಕವಾಗಿ ಹರಡುತ್ತಿರುವ ಕೇರಳದಿಂದ ಜನರಿಗೆ ಈ ಗಡಿ ಭಾಗಗಳಲ್ಲಿ ಮುಕ್ತವಾಗಿ ಬರಲು ಅವಕಾಶ ನೀಡಿದರೆ ಇಲ್ಲಿನ ಜನರ ಜೀವನವನ್ನು ಅಪಾಯಕ್ಕೆ ಒಡ್ಡಿದಂತೆಯೇ ಆಗಲಿದೆ ಎಂಬ ಆತಂಕದಿಂದ ಈ ಗಡಿಭಾಗಗಳನ್ನು ಕಟ್ಟು ನಿಟ್ಟಾಗಿ ಮುಚ್ಚಲಾಗಿತ್ತು.ಇದನ್ನು ಕೇರಳ ಸರಕಾರ ಆಕ್ಷೇಪಿಸಿ ತಕರಾರೆತ್ತಿತ್ತು.ಗಡಿ ಭಾಗದ ಕಾಸರಗೋಡಿನಲ್ಲಿ ಸಾಕಷ್ಟು ವೈದ್ಯಕೀಯ ಮೂಲಸೌಕರ್ಯಗಳಿಲ್ಲದೆ ಜನರು ಕರ್ನಾಟಕವನ್ನು ಅವಲಂಬಿಸುತ್ತಿರುವುದನ್ನು ಅದು ಬೊಟ್ಟು ಮಾಡಿ ಇದು ಅನ್ಯಾಯ ಎಂದು ಹೇಳಿಕೊಂಡಿತ್ತು. ಆದರೆ ಕೇರಳದ ಈವರೆಗಿನ ಆಳಿದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಸರಕಾರಗಳು ಕಾಸರಗೋಡು ಜಿಲ್ಲೆಯನ್ನು ತೀರಾ ಕಡೆಗಣಿಸುತ್ತಲೇ ಬಂದಿದ್ದರಿಂದ ಆ ಜಿಲ್ಲೆಯಲ್ಲಿ ಯಾವುದೇ ವೈದ್ಯಕೀಯ, ಶಿಕ್ಷಣ ಮತ್ತು ಇತರ ಔದ್ಯಮಿಕ ಮೂಲಸೌಕರ್ಯಗಳ ಕೊರತೆ ಉಂಟಾಗಲು ಕಾರಣವಾಗಿದೆ.ಅಲ್ಲಿನ ಸರಕಾರಗಳ ಬೇಜವಾಬ್ದಾರಿತನಕ್ಕೆ ಈಗ ಕರ್ನಾಟಕದ ಜನತೆಯನ್ನು ಬಲಿಕೊಡಲು ಸಾಧ್ಯವಿಲ್ಲ.ಅಲ್ಲದೆ ಕೇರಳದಲ್ಲೇ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಗಡಿಗಳಲ್ಲಿ ಕೂಡ ನಿರ್ಬಂಧ ವಿಸಿರುವುದನ್ನು ಕರ್ನಾಟಕದ ಜನತೆ ಬೊಟ್ಟು ಮಾಡಿತ್ತು.
ಈಗಾಗಲೇ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಣ ಬಾಂಧವ್ಯ ಅನನ್ಯವಾದುದು.ಕೇರಳದ ಜನತೆ ಬಗ್ಗೆ ನಮಗೆ ಅತ್ಯಂತ ಗೌರವಾದರಗಳಿವೆ.ಆದರೆ ಈಗಿನ ಸ್ಥಿತಿಯಲ್ಲಿ ರಾಜ್ಯದ ಮತ್ತು ಜಿಲ್ಲೆಯ ಜನತೆಯ ಬದುಕನ್ನು ಅಪಾಯಕ್ಕೊಡ್ಡಲು ನಾವು ಸಿದ್ಧರಿಲ್ಲ . ಉಳಿದಂತೆ ಮುಂದಿನ ದಿನಗಳಲ್ಲೂ ಈ ಬಾಂಧವ್ಯ ಎಂದಿನಂತೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದರು.
ಹಾಗೆಯೇ ಕೋವಿಡ್ ನಿಯಂತ್ರಣಕ್ಕೆ ದ.ಕ.ಜಿಲ್ಲೆಯ ನೋಡಲ್ ಅಕಾರಿಗಳೂ ಆಗಿರುವ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರು ಕೂಡಾ ನಾವು ಸಾಕಷ್ಟು ಅಳೆದು ತೂಗಿ ಅನಿವಾರ್ಯವಾಗಿ ಗಡಿಯಲ್ಲಿ ಇಂತಹ ನಿರ್ಬಂಧವನ್ನು ವಿಸಿದ್ದಾಗಿ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss