Tuesday, June 28, 2022

Latest Posts

ಕೇರಳ ಕೆಎಸ್‌ಆರ್‌ಟಿಸಿಯಲ್ಲಿ ಬಿಎಂಎಸ್‌ಗೆ ಸ್ಥಾನ: ಆತಂಕದಲ್ಲಿ ಸಿಪಿಎಂ, ಕಾಂಗ್ರೆಸ್

ಹೊಸ ದಿಗಂತ ವರದಿ, ಕಾಸರಗೋಡು:

ರಾಜ್ಯದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಯಲ್ಲಿ ನಡೆದ ಹಿತ ಪರಿಶೀಲನೆ ಚುನಾವಣೆಯಲ್ಲಿ ಪ್ರಥಮವಾಗಿ ಬಿಜೆಪಿಯ ಕಾರ್ಮಿಕರ ಸಂಘಟನೆಯಾದ ಬಿಎಂಎಸ್‌ಗೆ ಅಂಗೀಕಾರ ಲಭಿಸಿದೆ. ಈ ಮೂಲಕ ಸಿಪಿಎಂ ಮತ್ತು ಕಾಂಗ್ರೆಸ್‌ಗೆ ಅತೀ ದೊಡ್ಡ ಹೊಡೆತ ಉಂಟಾಗಿದೆ.
36 ವರ್ಷಗಳಲ್ಲಿ ಪ್ರಥಮವಾಗಿ ಬಿಎಂಎಸ್‌ಗೆ ಕೆಎಸ್‌ಆರ್‌ಟಿಸಿಯಲ್ಲಿ ಅಂಗೀಕಾರ ದೊರೆತಿದೆ. ಅಂಗೀಕಾರ ಲಭಿಸಲು ಒಟ್ಟು ಮತದಾನದ 10 ಶೇಕಡಾ ಬೇಕಾಗಿದ್ದು , ಬಿಎಂಎಸ್‌ಗೆ 18.21 ಶೇಕಡಾ ಮತ ಲಭಿಸಿದೆ. ಕಳೆದ ಬಾರಿಗಿಂತ ಈ ಬಾರಿ 13.26 ಶೇಕಡಾ ಮತ ಸಿಐಟಿಯು ಆಶ್ರಯದ ಕೆಎಸ್‌ಆರ್‌ಟಿಇ ಯೂನಿಯನ್‌ಗೆ ನಷ್ಟವಾಗಿದೆ. ಕಾಂಗ್ರೆಸ್‌ನ ಕಾರ್ಮಿಕ ಸಂಘಟನೆಯಾದ ಟಿಡಿಎಫ್‌ಗೆ ಎರಡು ಶೇಕಡಾಕ್ಕಿಂತ ಕಡಿಮೆ ಮತ ಲಭಿಸಿದೆ. ಕಳೆದ ಬಾರಿಯ 8 ಶೇಕಡಾದಿಂದ ಈ ಬಾರಿ 18.21 ಶೇಕಡಾದಷ್ಟು ಬಿಎಂಎಸ್ ಯೂನಿಯನ್‌ಗೆ ಮತ ಲಭಿಸಿರುವುದು ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಾರೀ ನಡುಕ ಉಂಟಾಗಲು ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss