ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ವಿಭಾಗವನ್ನು ಸ್ಥಾಪಿಸಲಾಗಿದ್ದು , ಅದರಂತೆ
ಕಳೆದ ವರ್ಷದಿಂದ ಕನ್ನಡ ಎಂಎ ಪದವಿ ಶಿಕ್ಷಣವನ್ನು ಆರಂಭಿಸಲಾಗಿದೆ. ಮಾನ್ಯತೆಯನ್ನು ಪಡೆದಿರುವ ವಿಶ್ವವಿದ್ಯಾನಿಯದಿಂದ ಯಾವುದೇ ಪದವಿಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳನ್ನು ಪಡೆದಿರುವ ಹಾಗೂ ಕನ್ನಡವನ್ನು ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿ ಶೇಕಡಾ 50 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಹಾಗೂ ಶೇಕಡಾ 45 ಅಂಕಗಳನ್ನು ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕನ್ನಡ ಎಂಎ ಪದವಿ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ. ಪ್ರವೇಶಾತಿ ಬಯಸುವ ಅಭ್ಯರ್ಥಿಗಳಿಗೆ ದಿನಾಂಕ 01.07.2020 ರೊಳಗಾಗಿ 25 ವರ್ಷ ಮೀರಿರಬಾರದು. ಒಟ್ಟು 50 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಮುಖ್ಯಸ್ಥರು, ಕನ್ನಡ ವಿಭಾಗ, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ, ತೇಜಸ್ವಿನಿ ಹಿಲ್ಸ್ , ಪೆರಿಯಾ ಅಂಚೆ, ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ ಈ ವಿಳಾಸದಲ್ಲಿ ಅಥವಾ 9448952011, 9731108974, 9731325093 ಈ ಮೊಬೈಲ್ ನಂಬರ್ ಗೆ ಕರೆ ಮಾಡಬಹುದು.