ಕೇರಳ: ಕೊರೋನಾ ವೈರಸ್ ತಡೆಗೆ 2,36,000 ಮಂದಿ ಸ್ವಯಂಸೇವಕರ ಪಡೆ

0
100

ಕಾಸರಗೋಡು: ಕೋವಿಡ್ 19 ವಿರುದ್ಧ ಹೋರಾಡಲು 22ರಿಂದ 40 ವರ್ಷ ವಯಸ್ಸಿನ ಸ್ವಯಂಸೇವಕ ಪಡೆಗಳನ್ನು ಸಜ್ಜುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಹಂತದಲ್ಲಿ ಸುಮಾರು 2,36,000 ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು. 941 ಪಂಚಾಯತ್‌ ಗಳಲ್ಲಿ ತಲಾ 200, 87 ಪುರಸಭೆಗಳಲ್ಲಿ ತಲಾ 500 ಮತ್ತು ಆರು ನಿಗಮಗಳಲ್ಲಿ ತಲಾ 750 ಸ್ವಯಂ ಸೇವಕರು ಇರಲಿದ್ದಾರೆ. ಸ್ವಯಂಸೇವಕರಾಗಲು, ನಾವು ಸನ್ನದ್ಧ ಎಂಬ ವೆಬ್‌ ಪೋರ್ಟಲ್ ಮೂಲಕ ಆನ್‌ಲೈನ್‌ ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಯುವಕರು ಅರ್ಪಣಾ ಮನೋಭಾವದಿಂದ ಮುಂದೆ ಬರಬೇಕು ಎಂದರು.
ಅವರು ವಿಭಿನ್ನ ಕಾರ್ಯಗಳನ್ನು ನಿರ್ವಹಿಸ ಬೇಕಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜುಗಳನ್ನು ಮನೆಗೆ ತಲುಪಿಸಲು ಸ್ವಯಂಸೇವಕರ ಸಹಾಯದ ಅಗತ್ಯವಿದೆ. ಆಸ್ಪತ್ರೆಯಲ್ಲಿ ಜೊತೆಗಿರಲು, ಸ್ಥಳೀಯ ಉತ್ಪನ್ನಗಳ ನಿಯಮಿತ ವಿತರಣೆ ಮತ್ತು ಇತರ ಕಾರಣಗಳಿಂದ ಬಿಟ್ಟು ಹೋದವರನ್ನು ಪತ್ತೆಹಚ್ಚಿ ಸಹಾಯ ನೀಡಲು ಇವರ ಸಹಾಯವನ್ನು ಉಪಯೋಗಿಸುವೆವು. ಸ್ವಯಂಸೇವಕರಿಗೆ ಗುರುತಿನ ಚೀಟಿ ನೀಡಲಾಗುವುದು. ಪ್ರಯಾಣ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ಭರಿಸುತ್ತವೆ. ಅಸ್ತಿತ್ವದಲ್ಲಿರುವ ಸಾಮಾಜಿಕ ಸ್ವಯಂಸೇವಕರ ಭಾಗವಾಗಿ ಅವರನ್ನು ಬದಲಾಯಿಸಲಾಗುವುದು. ಅವರಿಗೆ ಸ್ಥಳೀಯವಾಗಿ ತರಬೇತಿ ನೀಡಲಾಗುವುದು. ಆಸ್ಪತ್ರೆಯಲ್ಲಿರುವವರಿಗೆ ವಸತಿ ಕಲ್ಪಿಸಲು ಯುವ ಆಯೋಗವು ಒಂದೇ ದಿನದಲ್ಲಿ ೧೪೬೫ ಸ್ವಯಂಸೇವಕರನ್ನು ಸಿದ್ಧಪಡಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪಡಿತರ ಚೀಟಿ ಇಲ್ಲದವರಿಗೆ ರಾಜ್ಯದಲ್ಲಿ ಪಡಿತರ ಅಂಗಡಿಗಳ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಆಹಾರ ಇಲಾಖೆ ಕ್ರಮ ಕೈಗೊಳ್ಳಲಿದೆ. ಅವರ ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ ಅವರು ಇತರ ಪಡಿತರ ಚೀಟಿಗಳಲ್ಲಿ ಅವರ ಹೆಸರಿಲ್ಲದಿರುವುದನ್ನು ಪರಿಶೀಲಿಸಿದ ನಂತರ  ಆಹಾರವನ್ನು ಒದಗಿಸಲಾಗುವುದು. ಸಹಕಾರ ಸಂಘಗಳ ಮೂಲಕ ಕ್ಷೇಮ ಪಿಂಚಣಿ ವಿತರಣೆಯನ್ನು ಪ್ರಾರಂಭಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆದು ಕೊಂಡು  ದುಬಾರಿ ಮಾರಾಟ ಮಾಡಲು ಬಿಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಸಗಟು ವ್ಯಾಪಾರಿಗಳೊಂದಿಗೆ ಆಡಿಯೋ ಸಮ್ಮೇಳನವನ್ನು ನಡೆಸಲಾಯಿತು. ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಿಗಳಿಗೆ ಸರಕುಗಳ ವಿತರಣೆಗೆ ಅಡ್ಡಿಯಾಗುವುದಿಲ್ಲ. ಮೂರು ಅಥವಾ ನಾಲ್ಕು ತಿಂಗಳಿಗೆ ಅಗತ್ಯವಿರುವ ಸರಕುಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇತರ ರಾಜ್ಯಗಳಿಂದ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ತೊಂದರೆಯನ್ನು ನಿವಾರಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು.

ಇದನ್ನು ಉನ್ನತ ಮಟ್ಟದ ತಂಡವು ಪರಿಶೀಲಿಸುತ್ತದೆ. ಇತರ ರಾಜ್ಯಗಳಿಂದ ಆಹಾರ ಸರಕುಗಳನ್ನು ಆಮದು ಮಾಡಿಕೊಳ್ಳಲು ಅಗತ್ಯವಿದ್ದರೆ, ಬೆಂಗಾವಲು ವಾಹನಗಳನ್ನು ಕಾನ್ವೊಯ್ ಆಧಾರದ ಮೇಲೆ ಕಳುಹಿಸಲಾ ಗುವುದು. ಇದಕ್ಕೆ  ಸಂಬಂಧಪಟ್ಟು ಇತರ ಎಲ್ಲ ರಾಜ್ಯ ಸರಕಾರಗಳೊಂದಿಗೆ ಒಮ್ಮತವನ್ನು ತರಲಿದೆ. ಕೇಂದ್ರ ಸಹಾಯವನ್ನೂ ಕೋರಲಾಗುವುದು ಎಂದರು.

ವಲಸೆ ಕಾರ್ಮಿಕರನ್ನು ತಮ್ಮ ವಸತಿಗಳಿಂದ ಹೊರಹಾಕುವ ಪ್ರಯತ್ನಗಳು ನಡೆದಿವೆ. ಇದನ್ನು ಅನುಮತಿಸಲಾಗುವುದಿಲ್ಲ. ಅವರನ್ನು ಹೊರಹಾಕುವ  ಬದಲು ಅವರಿಗೆ ಸರಿಯಾದ ವಸತಿ, ಆಹಾರ ಮತ್ತು ವೈದ್ಯಕೀಯ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ರಾಜ್ಯ ಮಟ್ಟದಲ್ಲಿ ವಿಶೇಷ ಜವಾಬ್ದಾರಿಗಳನ್ನು ಸಹ ಖಚಿತಪಡಿಸಿಕೊಳ್ಳಲಾಗುವುದು.

ಕೇರಳದಲ್ಲಿ ಕೋವಿಡ್ ರಕ್ಷಣಾ ಚಟುವಟಿಕೆಗಳ ಬಗ್ಗೆ ವಿಚಾರಿಸಲು ಪ್ರಧಾನಮಂತ್ರಿಯ ಸೂಚನೆಯ ಮೇರೆಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಸುದ್ದಿಗೋಷ್ಠಿ ಕರೆದಿದ್ದರು. ಕೇರಳದ ಕೋವಿಡ್ ರಕ್ಷಣಾ ಕ್ರಮಗಳಿಂದ ಅವರು ತುಂಬಾ ಪ್ರಭಾವಿತರಾದರು ಎಂಬುದು ಸಂತಸದ ವಿಷಯ. ಕೇರಳದ ಪ್ರತಿದಿನದ ಚಟುವಟಿಕೆಗಳನ್ನು  ಕೇಂದ್ರಕ್ಕೆ ತಿಳಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರದ ಹಣಕಾಸು ಸಚಿವರು ಪ್ರಸ್ತಾಪಿಸಿದ ಕೋವಿಡ್ ಪ್ಯಾಕೇಜ್ ಸ್ವಾಗತಿಸುವೆವು. ಉದ್ಯೋಗ ಖಾತರಿ ಯೋಜನೆಯ ಉದ್ಯೋಗಿಗಳ ವೇತನವನ್ನು ಹೆಚ್ಚಿಸುವಂತೆ ಕೇರಳ ಒತ್ತಾಯಿಸಿತ್ತು. ನಾವು ಕೈಗೊಂಡ ಕೋವಿಡ್ ರಕ್ಷಣಾ ಕ್ರಮಗಳನ್ನು ಬೆಂಬಲಿಸಲು ಕೇಂದ್ರ ಪ್ಯಾಕೇಜ್ ಅನ್ನು ಬಳಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

LEAVE A REPLY

Please enter your comment!
Please enter your name here