Saturday, August 13, 2022

Latest Posts

ಕೇರಳ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ: ತಪ್ಪೊಪ್ಪಿಕೊಳ್ಳುವೆ ಎಂದ ಆರೋಪಿ ಸಂದೀಪ್‌ ನಾಯರ್‌

ತಿರುವನಂತಪುರಂ: ಕೇರಳದ ಚಿನ್ನ ಅಕ್ರಮ ಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಸಂದೀಪ್‌ ನಾಯರ್‌ ತಪ್ಪೊಪ್ಪಿಕೊಳ್ಳುವುದಾಗಿ ಹೇಳಿದ್ದಾನೆ.
ಸಿಆರ್‌ಪಿಸಿ 164ರ ಅಡಿ ತಪ್ಪೊಪ್ಪಿಕೊಳ್ಳುವುದಾಗಿ ಸ್ವತಃ ಆರೋಪಿ ನಾಯರ್‌ ಹೇಳಿಕೆ ನೀಡಿದ್ದು, ಈ ಸಂಬಂಧ ಕೊಚ್ಚಿಯ ಎನ್‌ಐಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಸಿಜೆಎಂ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸುವ ಮುನ್ನ ಎನ್ಐಎ ಅಧಿಕಾರಿಗಳು ಈತನ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಆರೋಪಿ ಅನುಮೋದಕನೆಂದು ಪರಿಗಣಿಸುವುದಿಲ್ಲ ಎಂದು ಆಪಾದನೆಯ‌ ಮಟ್ಟದಿಂದಲೇ ಈತನನ್ನು ಪ್ರಕರಣದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಈ ಮೊದಲು ಹೇಳಿತ್ತು.
ಕೇರಳ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ ಸಂಬಂಧ ಜುಲೈ 11 ರಂದು ಎನ್ಐಎ ಬೆಂಗಳೂರಿನಲ್ಲಿ ಸ್ವಪ್ನಾ ಸುರೇಶ್‌ ಹಾಗೂ ಸಂದೀಪ್‌ ನಾಯರ್‌ರನ್ನು ಬಂಧಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss