ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣವು ಮತ್ತಷ್ಟು ತಿರುವು ಪಡೆದುಕೊಳ್ಳುತ್ತಾ ಇದ್ದು, ಈ ಸಂಬಂಧ ಇಂದುರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಮೊಹಮ್ಮದ್ ಅಸ್ಲಾಮ್, ಅಬ್ದುಲ್ ಲತೀಫ್, ನಜರುದ್ದೀನ್ ಶಾ, ರಂಜಾನ್ ಪಿ ಮತ್ತು ಮುಹಮ್ಮದ್ ಮನ್ಸೂರ್ ಎಂಬ ಐದು ಆರೋಪಿಗಳ ನಿವಾಸಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಇನ್ನು ಈ ಐವರು ಆರೋಪಿಗಳು ಈಗಾಗಲೇ ಬಂಧನಕ್ಕೊಳಗಾಗಿದ್ದು, ಇತರರೊಂದಿಗೆ ಸಂಚು ಹೂಡಿದ್ದಾರೆ ಎಂದು ಎನ್ಐಎ ಹೇಳಿದೆ.
ದಾಳಿಯ ವೇಳೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧಿಸಿ ಈಗಾಗಲೇ ಎನ್ಐಎ 21 ಜನರನ್ನು ಬಂಧಿಸಿದೆ.