Sunday, June 26, 2022

Latest Posts

ಕೇರಳ ಚಿನ್ನ ಕಳ್ಳಸಾಗಣೆ: 7 ದಿನ ಇಡಿ ವಶಕ್ಕೆ ಎಂ. ಶಿವಶಂಕರ್

ಕೊಚ್ಚಿ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಏಳು ದಿನಗಳ ಕಾಲ ಇಡಿ ಕಸ್ಟಡಿಯಲ್ಲಿರಲು ಸೂಚಿಸಿದೆ.

ಎಂ. ಶಿವಶಂಕರ್ ಅವರನ್ನು ಇಡಿ ಅಧಿಕಾರಿಗಳು ಬುಧವಾರ ಬಂಧಿಸಿ, ಇಂದು ಸೆಷನ್ಸ್ ನ್ಯಾಯಾಲಯದೆದುರು ಹಾಜರುಪಡಿಸಿದ್ದರು. ಶಿವಶಂಕರ್ ಅವರನ್ನು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಇಡಿ ನ್ಯಾಯಾಲಯಕ್ಕೆ ಕೋರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಂ. ಶಿವಶಂಕರ್ ಅವರನ್ನು 7 ದಿನಗಳು ಇಡಿ ಕಸ್ಟಡಿಗೆ ನೀಡಿದೆ. ಶಿವಶಂಕರ್ ಅವರನ್ನು ನಿನ್ನೆ ಕೊಚ್ಚಿಯ ಇಡಿ ಕಚೇರಿಗೆ ವಿಚಾರಣೆಗೆ ಒಳಪಡಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss