Monday, August 8, 2022

Latest Posts

ಕೇರಳ ಪಂಚಾಯತ್ ಚುನಾವಣಾ ಖರ್ಚು ವೆಚ್ಚಗಳಿಗೆ 100 ಕೋಟಿ ರೂಪಾಯಿ ಮಂಜೂರು

ತಿರುವನಂತಪುರ: ಕೇರಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗಾಗಿ ರಾಜ್ಯ ಸರಕಾರವು 100 ಕೋಟಿ ರೂಪಾಯಿ ಮಂಜೂರು ಮಾಡಿದೆ. ಪ್ರಾಥಮಿಕ ಖರ್ಚು ವೆಚ್ಚಗಳಿಗಾಗಿ ಸರಕಾರವು ಈ ಹಿಂದೆ 50 ಕೋಟಿ ರೂ. ಮೊತ್ತವನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು. ಅದಾದ ನಂತರ ಈ 100 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಪಂಚಾಯತ್ ಚುನಾವಣೆ ನಡೆಸಲು 185 ಕೋಟಿ ರೂ.ಗಳ ವೆಚ್ಚವನ್ನು ಚುನಾವಣಾ ಆಯೋಗವು ಅಂದಾಜಿಸಿದೆ. ಹೊಸ ಮತದಾನ ಯಂತ್ರಗಳ ಖರೀದಿಗೆ 18 ಲಕ್ಷ ರೂ. ಬೇಕಾಗಿ ಬರಲಿದೆ.
ಚುನಾವಣಾ ಆಯೋಗದ ಅಧೀನದಲ್ಲಿ ಈಗಿರುವ ಮತದಾನ ಯಂತ್ರಗಳನ್ನು ಪರಿಶೀಲಿಸಲು ಹಾಗೂ ಅವುಗಳು ಕಾರ್ಯರಹಿತಗೊಂಡಿದ್ದಲ್ಲಿ ದುರಸ್ತಿಗೊಳಿಸಲು ಹೈದರಾಬಾದ್ ನಿಂದ ತಜ್ಞರ ತಂಡವನ್ನು ಕರೆಸಬೇಕಾಗಿದೆ. ಅದಕ್ಕೆ ತಗಲುವ ಖರ್ಚಿಗೂ ಪ್ರತ್ಯೇಕ ಹಣ ಮೀಸಲಿರಿಸಬೇಕಾಗಿ ಬರಲಿದೆ ಎಂದೂ ಚುನಾವಣಾ ಆಯೋಗವು ರಾಜ್ಯ ಸರಕಾರಕ್ಕೆ ಸಮಗ್ರ ವಿವರ ಸಲ್ಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss