Wednesday, September 23, 2020
Wednesday, September 23, 2020

Latest Posts

ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಮೇಲೆ ಇನ್ನೊಂದು ಕೇಸು ದಾಖಲು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣಾ ಪೊಲೀಸರು ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ವಿರುದ್ಧ ಇನ್ನೊಂದು ಕೇಸು ದಾಖಲಿಸಿದ್ದಾರೆ. ಪಯ್ಯನ್ನೂರು ವೆಳ್ಳೂರು...

ಬಳ್ಳಾರಿ| 60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿಪೂಜೆ

ಬಳ್ಳಾರಿ: 2019-20ನೇ ಸಾಲಿನ ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ಮಂಜೂರಾದ ಹೊಸಪೇಟೆ ನಗರದ ಟಿ.ಬಿ.ಡ್ಯಾಂನ ಸರಕಾರಿ ಪ್ರೌಡಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲಾಖೆಯಿಂದ...

ಬಳ್ಳಾರಿ| 1.44 ಕೋಟಿ ಮೊತ್ತದ ಕ್ರೀಡಾಂಗಣ ಕಾಮಗಾರಿಗಳ ಭೂಮಿಪೂಜೆ

ಬಳ್ಳಾರಿ: ಸಚಿವರ ಶ್ರಮದಿಂದ ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು. ಹೊಸಪೇಟೆ ತಾಲೂಕಿನ ಒಳಾಂಗಣ...

ಕೇರಳ ಪಂಚಾಯತ್ ಚುನಾವಣೆ ಮತದಾರ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ನಡೆಸಲು ಸಿಪಿಎಂ, ಮುಸ್ಲಿಂಲೀಗ್ ಒಳಸಂಚು: ಜಿಲ್ಲಾ ಬಿಜೆಪಿ ಆರೋಪ

sharing is caring...!

ಕಾಸರಗೋಡು: ಸಿಪಿಎಂ ಹಾಗೂ ಮುಸ್ಲಿಂಲೀಗ್ ಪಕ್ಷಗಳು ಅಪವಿತ್ರ ಮೈತ್ರಿ (ಒಳ ಒಪ್ಪಂದ) ಮಾಡಿಕೊಂಡು ಎಡ ಮತ್ತು ಐಕ್ಯರಂಗಗಳ ಬೆಂಬಲಿಗರಾದ ಅಧಿಕಾರಿಗಳ ಸಹಾಯದೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಮತದಾರರ ಪಟ್ಟಿಯನ್ನು ಬುಡಮೇಲುಗೊಳಿಸಲು ವ್ಯವಸ್ಥಿತ ಸಂಚು ನಡೆಸುತ್ತಿವೆಯೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜರಗಿದ ಪಕ್ಷದ ಜಿಲ್ಲಾ ಸಮಿತಿಯ ಸಭೆಯು ಗಂಭೀರವಾಗಿ ಆರೋಪಿಸಿದೆ.
ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದ ನೂರಾರು ಮಂದಿ ಬಿಜೆಪಿ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನ್ಯಾಯಯುತವಾಗಿ ಸೇರಿಸದೆ ವಂಚಿಸಲಾಗಿದೆ.
ಬಿಜೆಪಿ ಬೆಂಬಲಿಗರಾದ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಒಳಸಂಚು ನಡೆಯುತ್ತಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಿಪಿಎಂ ಹಾಗೂ ಮುಸ್ಲಿಂಲೀಗ್ ನೀಡಿದ ಸೂಚನೆ ಪ್ರಕಾರ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಎಡ ಹಾಗೂ ಐಕ್ಯರಂಗ ಬೆಂಬಲಿಗ ಅಧಿಕಾರಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. ಕೇರಳ ಸರಕಾರ ಮತ್ತು ಎಡ ಹಾಗೂ ಐಕ್ಯರಂಗಗಳ ನೌಕರರ ಸಂಘಟನೆಗಳ ಬೆಂಬಲದೊಂದಿಗೆ ಬಿಜೆಪಿ ಬೆಂಬಲಿತ ಮತದಾರರನ್ನು ಕಾನೂನುಬಾಹಿರವಾಗಿ ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆದಿದೆ. ಮತದಾರರ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ಹಾಗೂ ಅವ್ಯವಹಾರ ನಡೆಸಲು ಪ್ರಯತ್ನಗಳು ಮುಂದುವರಿಯುತ್ತಿವೆ ಎಂದು ಬಿಜೆಪಿ ಜಿಲ್ಲಾ ನೇತಾರರ ಸಭೆಯು ಬಹಿರಂಗಪಡಿಸಿದೆ. ರಾಜಕೀಯ ಬಣ್ಣ ನೋಡಿ ಉದ್ಯೋಗಿಗಳಿಗೆ ಚುನಾವಣಾ ಜವಾಬ್ದಾರಿ ನೀಡಲಾಗುತ್ತಿದೆ.
ಪ್ರಾಮಾಣಿಕ, ನಿಷ್ಪಕ್ಷ ಹಾಗೂ ನಿಷ್ಠಾವಂತ ಅಧಿಕಾರಿಗಳನ್ನು ಯಾವುದೇ ಕಾರಣವಿಲ್ಲದೆ ಅನಧಿಕೃತವಾಗಿ ವರ್ಗಾಯಿಸಲು ಉನ್ನತ ಮಟ್ಟದಲ್ಲಿ ಯತ್ನ ಆರಂಭವಾಗಿದೆ. ಪಂಚಾಯತ್ ಚುನಾವಣೆಯ ಪ್ರಾಥಮಿಕ ತಯಾರಿಯ ಹಂತದಲ್ಲಿ ಮತದಾರರ ಪಟ್ಟಿ ಅಕ್ರಮಗೊಳಿಸುವ ಸಂಚು ಚುನಾವಣೆಯನ್ನು ಬುಡಮೇಲುಗೊಳಿಸುವ ಶ್ರಮ ಎಂದು ಬಿಜಿಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನೀಡಿದ ಅರ್ಜಿಗಳನ್ನು ತೀರ್ಮಾನಿಸುವಲ್ಲಿ ರಾಜಕೀಯ ಮಧ್ಯ ಪ್ರವೇಶಿಸಿದೆ ಎಂದು ಬಿಜೆಪಿ ಆಪಾದಿಸಿದೆ. ನೂರಾರು ಅರ್ಜಿಗಳನ್ನು
ರಾಜಕೀಯ ಪಕ್ಷ ನೋಡಿ ಕಾನೂನು ವಿರುದ್ಧವಾಗಿ ನಿರಾಕರಿಸಲಾಗುತ್ತಿದೆ ಮತ್ತು ಅನರ್ಹರನ್ನು ಮತದಾರರ
ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಬಗ್ಗೆ ನಡೆದಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಉನ್ನತ ಮಟ್ಟದಲ್ಲಿ ನಿಷ್ಪಕ್ಷ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ಬಿಜಿಪಿ ಒತ್ತಾಯಿಸಿದೆ. ರಾಜ್ಯ ಚುನಾವಣಾ ಆಯೋಗವು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ನಾಯಕರು ಒತ್ತಾಯಿಸಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಬಿಜೆಪಿ ಕಾಸರಗೋಡು ಜಿಲ್ಲಾ ನೇತಾರರ ಸಭೆಯಲ್ಲಿ ಪ್ರಮುಖರಾದ ಪ್ರಮೀಳಾ ಸಿ. ನಾಯ್ಕ್ , ಎಂ.ಸಂಜೀವ ಶೆಟ್ಟಿ , ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ , ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ , ಪಿ.ರಮೇಶ್ ಮೊದಲಾದವರು ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ.ವೇಲಾಯುಧನ್ ಸ್ವಾಗತಿಸಿ, ಎಂ.ಸುಧಾಮ ಗೋಸಾಡ ವಂದಿಸಿದರು.

Latest Posts

ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಮೇಲೆ ಇನ್ನೊಂದು ಕೇಸು ದಾಖಲು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣಾ ಪೊಲೀಸರು ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ವಿರುದ್ಧ ಇನ್ನೊಂದು ಕೇಸು ದಾಖಲಿಸಿದ್ದಾರೆ. ಪಯ್ಯನ್ನೂರು ವೆಳ್ಳೂರು...

ಬಳ್ಳಾರಿ| 60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿಪೂಜೆ

ಬಳ್ಳಾರಿ: 2019-20ನೇ ಸಾಲಿನ ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ಮಂಜೂರಾದ ಹೊಸಪೇಟೆ ನಗರದ ಟಿ.ಬಿ.ಡ್ಯಾಂನ ಸರಕಾರಿ ಪ್ರೌಡಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲಾಖೆಯಿಂದ...

ಬಳ್ಳಾರಿ| 1.44 ಕೋಟಿ ಮೊತ್ತದ ಕ್ರೀಡಾಂಗಣ ಕಾಮಗಾರಿಗಳ ಭೂಮಿಪೂಜೆ

ಬಳ್ಳಾರಿ: ಸಚಿವರ ಶ್ರಮದಿಂದ ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು. ಹೊಸಪೇಟೆ ತಾಲೂಕಿನ ಒಳಾಂಗಣ...

ಬಾಲಿವುಡ್ ಡ್ರಗ್ಸ್ ಕೇಸ್: ನಟಿ ದೀಪಿಕಾ ಪಡುಕೋಣೆ , ಸಾರಾ ಅಲಿಖಾನ್, ಶ್ರದ್ಧಾ ಕಪೂರ್, ರಕುಲ್​ ಪ್ರೀತಿ ಸಿಂಗ್​ಗೆ ಎನ್ ಸಿ ಬಿ ನೋಟಿಸ್ !

ಹೊಸದಿಲ್ಲಿ: ನಟಿ ದೀಪಿಕಾ ಪಡುಕೋಣೆ ಮತ್ತು ಆಕೆಯ ಮ್ಯಾನೇಜರ್‌ ಕರೀಷ್ಮಾ ಪ್ರಕಾಶ್‌ ನಡುವೆ ಡ್ರಗ್ಸ್‌ ಪೂರೈಕೆ ಸಂಬಂಧ ನಡೆದಿರುವ ವಾಟ್ಸ್‌ಆಯಪ್‌ ಸಂದೇಶ ವಿನಿಮಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಇದೀಗ...

Don't Miss

ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಮೇಲೆ ಇನ್ನೊಂದು ಕೇಸು ದಾಖಲು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣಾ ಪೊಲೀಸರು ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ವಿರುದ್ಧ ಇನ್ನೊಂದು ಕೇಸು ದಾಖಲಿಸಿದ್ದಾರೆ. ಪಯ್ಯನ್ನೂರು ವೆಳ್ಳೂರು...

ಬಳ್ಳಾರಿ| 60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿಪೂಜೆ

ಬಳ್ಳಾರಿ: 2019-20ನೇ ಸಾಲಿನ ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ಮಂಜೂರಾದ ಹೊಸಪೇಟೆ ನಗರದ ಟಿ.ಬಿ.ಡ್ಯಾಂನ ಸರಕಾರಿ ಪ್ರೌಡಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲಾಖೆಯಿಂದ...

ಬಳ್ಳಾರಿ| 1.44 ಕೋಟಿ ಮೊತ್ತದ ಕ್ರೀಡಾಂಗಣ ಕಾಮಗಾರಿಗಳ ಭೂಮಿಪೂಜೆ

ಬಳ್ಳಾರಿ: ಸಚಿವರ ಶ್ರಮದಿಂದ ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು. ಹೊಸಪೇಟೆ ತಾಲೂಕಿನ ಒಳಾಂಗಣ...
error: Content is protected !!