ಕಾಸರಗೋಡು: ಕೊರೋನಾದ ಮರೆಯಲ್ಲಿ ರಾಂಕ್ ಲಿಸ್ಟ್ ನಲ್ಲಿರುವವರನ್ನು ಬೆದರು ಬೊಂಬೆಗಳನ್ನಾಗಿ ಮಾಡಿ ರಾಜ್ಯ ಸರಕಾರದೊಂದಿಗೆ ಸೇರಿ ಕೇರಳ ಪಿಎಸ್ ಸಿ ನಡೆಸುವ ಹಿಂಬಾಗಿಲ ನೇಮಕಾತಿಯನ್ನು ಕೊನೆಗೊಳಿಸಬೇಕೆಂದು ಭಾರತೀಯ ಜನತಾ ಯುವಮೋರ್ಚಾದ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈಗ ರಾಂಕ್ ಲಿಸ್ಟ್ ನಲ್ಲಿರುವವರನ್ನು ಹೊರತುಪಡಿಸಿ ತಮಗೆ ಬೇಕಾದವರನ್ನು ನೇಮಕ ಮಾಡುವ ಹುನ್ನಾರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಯುವಮೋರ್ಚಾ ತಿಳಿಸಿದೆ. ಈ ಬಗ್ಗೆ ಕಾಸರಗೋಡಿನಲ್ಲಿ ಜರಗಿದ ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಶಿವನ್ ಕೇಳೋತ್, ಜಿಲ್ಲಾ ಉಪಾಧ್ಯಕ್ಷ ಶ್ರೀಜಿತ್ ಪರಕ್ಲಾಯಿ, ಪ್ರಮುಖರಾದ ಅಂಜು ಜೋಸ್ಟಿ , ಸಾಗರ್, ಜಯರಾಜ್ ಶೆಟ್ಟಿ , ಜಿತೇಶ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.