Sunday, June 26, 2022

Latest Posts

ಕೇರಳ ಪ್ಲಸ್ ವನ್ ಪ್ರವೇಶಾತಿ: ಈಜು ಅರಿಯುವಿಕೆಗೆ ಬೋನಸ್‌ ಅಂಕ

ಕಾಸರಗೋಡು: ಕೇರಳ ಪ್ಲಸ್ ವನ್ ತರಗತಿ ಪ್ರವೇಶಾತಿ ನಿಟ್ಟಿನಲ್ಲಿ ಈಜು ಅರಿಯುವಿಕೆಗೆ ಬೋನಸ್ ಅಂಕ‌ ಕೊಡಲು ಅಂಗೀಕಾರ ನೀಡಲಾಗಿದೆ. ಈ ನಿಮಿತ್ತ ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿಯವರು ಪ್ರತಿ ಸಹಿ‌ ( ಕೌಂಟರ್ ಸೈನ್) ನಡೆಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.  ಪ್ಲಸ್ ವನ್ ಪ್ರವೇಶಾತಿ ಬಯಸುವ ಈಜು ಬಲ್ಲವರು ಎರಡು ಬೋನಸ್ ಅಂಕ ಪಡೆಯುವ ಸಲುವಾಗಿ ಅರ್ಜಿದಾರರು ವಾಸಿಸುವ ಕಾರ್ಪೋರೇಶನ್, ನಗರಸಭೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರೀಡಾ ಮಂಡಳಿಗಳು ರಚನೆಯಾಗದ ಪ್ರದೇಶಗಳು ಇದ್ದಲ್ಲಿ ಜಿಲ್ಲಾ ಕ್ರೀಡಾ ಮಂಡಳಿಗೆ ಈಜು ಪ್ರಮಾಣ ಪತ್ರ ವಿತರಿಸಲು ಅಧಿಕಾರ ನೀಡಲಾಗಿದೆ‌.
ಈಜು ಪರೀಕ್ಷೆ ನಡೆಸದೇ ಜಿಲ್ಲಾ ಕ್ರೀಡಾ ಮಂಡಳಿಯು ಪ್ರಮಾಣ ಪತ್ರಗಳನ್ನು ನೀಡುವುದಿಲ್ಲ. ಆದರೂ ಕೋವಿಡ್ ಹಿನ್ನೆಲೆಯಲ್ಲಿ ಪಂಚಾಯತ್ ಅಥವಾ ನಗರಸಭೆಯ ಕ್ರೀಡಾ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು ನೀಡುವ‌ ಪ್ರಮಾಣ ಪತ್ರ , ಅಂಗೀಕೃತ ಈಜು ಶಿಬಿರಗಳಲ್ಲಿ ಭಾಗವಹಿಸಿದವರು ತರಬೇತಿ ಕೇಂದ್ರಗಳಲ್ಲಿ ತರಬೇತುದಾರರು ನೀಡುವ ಎಲ್ಲಾ ರೀತಿಯ ಈಜು ಪ್ರಮಾಣಪತ್ರ , ಕ್ರೀಡಾ ಮಂಡಳಿಗಳು ರಚನೆಯಾಗದ ಪಂಚಾಯತ್ ಅಥವಾ ನಗರಸಭೆ ಅಧ್ಯಕ್ಷರು, ಕಾರ್ಯದರ್ಶಿಗಳು ನೀಡುವ ಈಜುವಿಕೆ ಜ್ಞಾನ ದೃಢಪಡಿಸುವ ಪ್ರಮಾಣ ಪತ್ರಗಳ ಪ್ರತಿ ಮತ್ತು ಸಹಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಪ್ರಮಾಣಪತ್ರ ನೀಡುವ ವ್ಯಕ್ತಿಗಳು ಮತ್ತು ಕೇಂದ್ರಗಳು ಅದರ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ಮಕ್ಕಳು ಖುದ್ದಾಗಿ ಆಗಮಿಸುವ ಬದಲು, ಕ್ರೀಡಾ ಮಂಡಳಿಯ ಕಾರ್ಯ ನಿರ್ವಾಹಕ ಸದಸ್ಯರು, ಶಿಕ್ಷಕರ ಮೂಲಕ ಮೂಲ ದಾಖಲೆ, ಎರಡು ಪ್ರತಿಗಳು ಮತ್ತು ಅಫಿಡವಿಟ್ ನ್ನು ಜಿಲ್ಲಾ ಕ್ರೀಡಾ ಮಂಡಳಿ ಕಚೇರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss