Saturday, July 2, 2022

Latest Posts

ಕೇರಳ ಭಾಗದ ಹಲವು ಪ್ರದೇಶಗಳಲ್ಲಿ ಯುವಮೋರ್ಚಾ ನೇತೃತ್ವದಲ್ಲಿ ರಸ್ತೆ ತಡೆ, ಮಣ್ಣು ತೆರವು

ಕಾಸರಗೋಡು: ಕಾಸರಗೋಡು ಜಿಲ್ಲೆಯ ವಿವಿಧ ಗಡಿ ಭಾಗಗಳಲ್ಲಿ ಕೇಂದ್ರ ಸರಕಾರದ‌ ಕೋವಿಡ್ ನಿರ್ದೇಶನಗಳನ್ನು ಪಾಲಿಸದೆ ಗಡಿನಾಡ ಜನತೆಗೆ ಅನ್ಯಾಯ ಮಾಡುತ್ತಿರುವ ಕೇರಳ ಸರಕಾರದ ಮತ್ತು ಕಾಸರಗೋಡು ಜಿಲ್ಲಾಡಳಿತದ ವಿರುದ್ಧ ಭಾರತೀಯ ಜನತಾ ಯುವಮೋರ್ಚಾದ ನೇತೃತ್ವದಲ್ಲಿ ಗಡಿ ಪ್ರದೇಶಗಳ ರಸ್ತೆಗೆ ಅಡ್ಡವಾಗಿ ಹಾಕಲಾಗಿದ್ದ ಮಣ್ಣನ್ನು ಸ್ವಾತಂತ್ರ್ಯ ದಿನವಾದ ಶನಿವಾರ ತೆರವುಗೊಳಿಸಲಾಯಿತು.
ಅದರಂತೆ ಬೆಳ್ಳೂರು ಪಂಚಾಯತ್ ನ‌ ವಿವಿಧ ‌ಸ್ಥಳಗಳಲ್ಲಿ ಮಣ್ಣು ರಾಶಿ ತೆರವುಗೊಳಿಸುವ ಕಾರ್ಯವನ್ನು ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಉದ್ಘಾಟಿಸಿದರು. ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ ಬದಿಯಡ್ಕ ಅಧ್ಯಕ್ಷತೆಯನ್ನು ವಹಿಸಿದರು. ಜಿಲ್ಲಾ‌‌ ಕೋಶಾಧಿಕಾರಿ ಜಿತೇಶ್, ಕುಂಬ್ಡಾಜೆ ಪಂಚಾಯತ್ ಸಮಿತಿಯ ಅಧ್ಯಕ್ಷ ಪ್ರಮೋದ್ ಭಂಡಾರಿ, ಬೆಳ್ಳೂರು ಪಂಚಾಯತ್ ಘಟಕದ ಅಧ್ಯಕ್ಷ ಗೌತಮ್ ಮತ್ತು ಪಕ್ಷದ ಹಲವರು ನೇತೃತ್ವ ವಹಿಸಿದರು.
ಯುವಮೋರ್ಚಾ ನೇತೃತ್ವದಲ್ಲಿ ಅಂತಾರಾಜ್ಯ ಗಡಿಯಿಂದ ಮಣ್ಣನ್ನು ಸ್ವಾತಂತ್ರ್ಯ ದಿನದ ಅಂಗವಾಗಿ ತೆಗೆದುಹಾಕಲಾಯಿತು. ಅಂತಾರಾಜ್ಯ ಪ್ರಯಾಣಕ್ಕೆ ಕೇಂದ್ರ ಸರಕಾರದ ಅನುಮತಿ ಲಭಿಸಿದರೂ ಇನ್ನೂ ಕೂಡ ಮಣ್ಣು ತೆಗೆಯದ ಕಾರಣ ಯುವಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಏರ್ಪಡಿಸಲಾಯಿತು.
ಬೆಳ್ಳೂರು ಪಂಚಾಯತ್ ನ ಕಾಯರ್ ಪದವು ಎಂಬಲ್ಲಿ ನಡೆದ ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಉದ್ಘಾಟಿಸಿದರು. ಜಯಾನಂದ ಕುಳ ಮತ್ತು ಶ್ರೀಧರ ಬೆಳ್ಳೂರು ನೇತೃತ್ವ ವಹಿಸಿದ್ದರು.
ಯುವಮೋರ್ಚಾ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಮಣ್ಣು ತೆರವುಗೊಳಿಸುವ ಪ್ರಕ್ರಿಯೆ ನಡೆಯಿತು. ತೌಡುಗೋಳಿ, ವರ್ಕಾಡಿ, ಕುಂಜತ್ತೂರುಪದವು, ತಲೆಕ್ಕಿ , ಪಾತೂರು, ಬೆರಿಪದವು, ಪಾದೆಕಲ್ಲು ಮುಂತಾದ ಗಡಿ ಭಾಗಗಳಲ್ಲಿ ರಸ್ತೆಗೆ ಅಡ್ಡ ಹಾಕಲಾದ ಮಣ್ಣನ್ನು ತೆರವು ಮಾಡಲಾಯಿತು.
ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಜಯರಾಜ್ ಶೆಟ್ಟಿ , ಮಂಡಲ ಉಪಾಧ್ಯಕ್ಷ ಪ್ರಜ್ವಿತ್ ಶೆಟ್ಟಿ , ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿಯ ಅಧ್ಯಕ್ಷ ಲೋಕೇಶ್ ನೋಂಡ ಜೋಡುಕಲ್ಲು , ಪಂಚಾಯತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬದಿಯಾರು, ಯುವಮೋರ್ಚಾ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಮನುಕುಮಾರ್ ಪೆರುವೋಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಾಯಾರು, ವಿ.ಜಿ.ಚಿಪ್ಪಾರು, ಕೃಷ್ಣ ಪ್ರಸೀತ್, ವಿನೋದ್ ಕುಮಾರ್ ಕಾಯರ್ ಕಟ್ಟೆ ಮೊದಲಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss