Wednesday, August 17, 2022

Latest Posts

ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಕ್ವಾರಂಟೈನ್ ಗೆ

ತಿರುವನಂತಪುರ: ಕೇರಳ ಮುಜರಾಯಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರ ಅಧಿಕೃತ ನಿವಾಸದಲ್ಲಿರುವ ನೌಕರರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರು ಸ್ವಯಂ  ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಮಂಗಳವಾರ ನಡೆಸಿದ ಗಂಟಲ ದ್ರವ ಪರೀಕ್ಷೆಯಲ್ಲಿ ಸಚಿವರ ಅಧಿಕೃತ ನಿವಾಸದ ಉದ್ಯೋಗಿಗೆ ಕೋವಿಡ್ ದೃಢಗೊಂಡ ಹಿನ್ನೆಲೆಯಲ್ಲಿ ಸಚಿವರು ಈ ಕ್ರಮಕ್ಕೆ ಮುಂದಾದರು.
ಅಲ್ಲದೆ ಇತರ ನೌಕರರಿಗೆ ಸ್ವಯಂ ಕ್ವಾರಂಟೈನ್ ಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಯಾವುದೇ ಭಯಪಡುವ ಅಗತ್ಯವಿಲ್ಲ ಆದರೆ ಗರಿಷ್ಠ ಎಚ್ಚರಿಕೆ ಬೇಕೇ ಬೇಕು ಎಂದು ಸಚಿವರು ಫೇಸ್‍ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಸಚಿವರ ಕಚೇರಿ ಮತ್ತು ಅಧಿಕೃತ ನಿವಾಸದ ಎಲ್ಲ ಸಿಬ್ಬಂದಿಗಳನ್ನು ಮಂಗಳವಾರ ಪರಿಶೀಲಿಸಲಾಗಿದೆ. ಸಚಿವರ ಗಂಟಲ ದ್ರವ ಮಾದರಿಯನ್ನು ಕೂಡ ಪರೀಕ್ಷಿಸಲಾಗಿದೆ. ಆದರೆ ಫಲಿತಾಂಶವು ನಕಾರಾತ್ಮಕವಾಗಿತ್ತು. ಮುನ್ನೆಚ್ಚರಿಕೆಯ ಅಂಗವಾಗಿ ಸ್ವಯಂ ಕ್ವಾರಂಟೈನ್ ಕೈಗೊಂಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ತಿರುವನಂತಪುರದಲ್ಲಿ ನಡೆದ ವಿವಿಧ ಅಧಿಕೃತ ಸಭೆಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಕೋವಿಡ್ ರಕ್ಷಣೆಯ ಭಾಗವಾಗಿ ಲಾಕ್ ಡೌನ್ ನಿರ್ಬಂಧ ಮುಂದುವರಿದಿದೆ. ಈ ಸಭೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!