Monday, August 15, 2022

Latest Posts

ಕೇರಳ ರಾಜ್ಯಕ್ಕೆ ಮೊದಲ ಹಂತದಲ್ಲಿ 4.35 ಲಕ್ಷ ಕೋವಿಡ್ ವ್ಯಾಕ್ಸಿನ್

ಹೊಸ ದಿಗಂತ ವರದಿ,ಕಾಸರಗೋಡು:

ಕೇರಳಕ್ಕೆ ಮೊದಲ ಹಂತದಲ್ಲಿ 4,35,500  ಕೋವಿಡ್ ವ್ಯಾಕ್ಸಿನ್ ಲಭಿಸಲಿದೆ.  ಒಂದು ವ್ಯಾಕ್ಸಿನ್ ತೆರೆದರೆ ಅರು ಗಂಟೆಯೊಳಗೆ ಉಪಯೋಗಿಸಿ ಮುಗಿಸಬೇಕಾಗಿದೆ. ವ್ಯಾಕ್ಸಿನ್ ಸುರಕ್ಷಿತವಾಗಿಡಲು ಹಾಗೂ ವಿತರಿಸಲು ರಾಜ್ಯದಲ್ಲಿ ಸಿದ್ದತೆ ಪೂರ್ಣಗೊಂಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮೂರೂವರೆ ಲಕ್ಷದಷ್ಟು ಆರೋಗ್ಯ ಕಾರ್ಯಕರ್ತರು, ಮೆಡಿಕಲ್ ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮೊದಲಾದವರಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss