Sunday, June 26, 2022

Latest Posts

ಕೇರಳ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರಚನೆ

ಹೊಸ ದಿಗಂತ ವರದಿ, ಕಾಸರಗೋಡು:

ಪುಣ್ಯಕ್ಷೇತ್ರ ಶಬರಿಮಲೆ ಸಂರಕ್ಷಣೆಯ ಜೊತೆಗೆ ಲವ್ ಜಿಹಾದ್ ವಿಷಯವು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಅಸ್ತ್ರವಾಗಲಿದೆ. ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರಚಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೀಡಿರುವ ಹೇಳಿಕೆಯು ಅತ್ಯಂತ ಮಹತ್ವ ಪಡೆದಿದೆ.
ಕಳೆದ ಕೆಲವು ವರ್ಷಗಳಲ್ಲಿ ಏಳು ಸಾವಿರದಷ್ಟು ಹಿಂದು, ಕ್ರೈಸ್ತ ಯುವತಿಯರು ಲವ್ ಜಿಹಾದ್ ಜಾಲದಲ್ಲಿ ಸಿಲುಕಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ. ಇವರಲ್ಲಿ ಅನೇಕ ಮಂದಿ ಅಪಘಾನಿಸ್ತಾನದಲ್ಲಿ , ಕೆಲವರು ತುರ್ಕಿಯಲ್ಲಿ , ಇನ್ನೂ ಕೆಲವರು ಭಯೋತ್ಪಾದಕರ ಸೆರೆಯಲ್ಲೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಲವ್ ಜಿಹಾದ್ ಬಗ್ಗೆ ಹಿಂದು ಮತ್ತು ಕ್ರೈಸ್ತ ಸಮುದಾಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದು , ಇದರಿಂದ ಬಿಜೆಪಿಯು ಈ ವಿಷಯವನ್ನು ಚುನಾವಣಾ ವಿಷಯವನ್ನಾಗಿ ಮಾಡಿ ಜನರಿಗೆ ನ್ಯಾಯ ದೊರಕಿಸುವ ಪ್ರಯತ್ನದಲ್ಲಿದೆ.

ಯುವತಿಯರ ರಕ್ಷಣೆಗೆ ಮುಂದಾಗಿದೆ
ಹಿಂದು ಮತ್ತು ಕ್ರೈಸ್ತ ಧರ್ಮದ ಮುಖಂಡರು ಲವ್ ಜಿಹಾದ್ ವಿರುದ್ಧ ಕಠಿಣ ನಿಲುವು ತಾಳಿದ್ದಾರೆ. ವಿಶ್ವ ಹಿಂದು ಪರಿಷತ್, ಹಿಂದು ಐಕ್ಯ ವೇದಿಕೆ ಸಹಿತ ವಿವಿಧ ಹಿಂದು ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿವೆ. ಅಲ್ಲದೆ ಕ್ರೈಸ್ತ ಯುವ ಸಂಘಟನೆಗಳು ಕೂಡ ಲವ್ ಜಿಹಾದ್ ವಿರುದ್ಧ ಬಹಿರಂಗ ಸಮರ ಸಾರಿವೆ. ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿಕೊಂಡಿರುವ ಬಿಜೆಪಿ ರಾಜ್ಯ ಸಮಿತಿಯು ತೊಂದರೆಗೊಳಗಾಗುವ ಯುವತಿಯರ ರಕ್ಷಣೆಗೆ ಮುಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss