Saturday, July 2, 2022

Latest Posts

ಕೇರಳ ರಾಜ್ಯ ಅಕಾಡೆಮಿಯೊಂದರ ಅಧ್ಯಕ್ಷರ ಪುತ್ರನ ಕಾರಿನಲ್ಲಿ ಮದ್ಯ ಸಾಗಾಟ

ಕಾಸರಗೋಡು: ಕೇರಳ ರಾಜ್ಯ ಸರಕಾರದ ಅಕಾಡೆಮಿಯೊಂದರ ಅಧ್ಯಕ್ಷರ ಪುತ್ರನದ್ದೆಂದು ಹೇಳಲಾಗುತ್ತಿರುವ ವಾಹನದಿಂದ ಭಾರೀ ಮೊತ್ತದ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಗುರುವಾರ ರಾತ್ರಿ ವಶಪಡಿಸಲಾಗಿದೆ.

ರಾಜ್ಯ ಸರಕಾರದ ಪ್ರತಿಷ್ಠಿತ ಇಲಾಖೆಯೊಂದರ ಅಧ್ಯಕ್ಷರ ಮನೆ ಹಿತ್ತಲಿನಿಂದ ಅವರ ಪುತ್ರನದ್ದೆಂದು ಹೇಳಲಾಗುತ್ತಿರುವ ಕೆಎಲ್ 05, ಎಪಿ 8040 ಕಾರಲ್ಲಿ ಸಂಗ್ರಹಿಸಲಾಗಿದ್ದ ಕರ್ನಾಟಕ ನಿರ್ಮಿತ 10 ಬಾಟಲಿ ಬಿಯರ್, 180 ಮಿಲ್ಲಿ ಮದ್ಯ ವನ್ನು ವಶಪಡಿಸಲಾಗಿದೆ.

ಕರ್ನಾಟಕದಿಂದ ಅಕ್ರಮವಾಗಿ ಕಾರಿನ ಮೂಲಕ ಮದ್ಯ ರವಾನೆಯಾಗುತ್ತಿದೆ ಎಂಬ ರಹಸ್ಯ ಮಾಹಿತಿಯ ಮೇರೆಗೆ ಪೋಲೀಸರು ಮನೆ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆ ಹಿತ್ತಲಿನಿಂದ ವಾಹನವೊಂದು ತೆರಳುತ್ತಿರುವುದನ್ನು ಗಮನಿಸಿ ಬೆಂಬತ್ತಿ ಹಿಡಿದು ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಯಿತು. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಓಡಿ ಪರಾರಿಯಾದರೆಂದು ಪೋಲೀಸರು ತಿಳಿಸಿದ್ದಾರೆ. ಈ ಪೈಕಿ ಓರ್ವನ ಹೆಸರು ಮೃದುಲೇಶ್ ಹಾಗೂ ಇನ್ನೋರ್ವನನ್ನು ಕಮಲೇಶ್ ಎಂಬುದಾಗಿ ಪೊಲೀಸರು ಪತ್ತೆಹಚ್ಚಿದ್ದು ಇಬ್ಬರ ಬಂಧನಕ್ಕೂ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರು ಹಾಗೂ ಮದ್ಯವನ್ನು ಪೋಲೀಸರು ವಶಪಡಿಸಿಕೊಂಡಿರುವರು. ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರತಿಷ್ಠಿತ ಅಕಾಡೆಮಿಯ ಅಧ್ಯಕ್ಷರು ಜನಪ್ರಿಯ ವ್ಯಕ್ತಿಯಾಗಿದ್ದು, ಅವರ ನೇರ ಅರಿವಿನಲ್ಲೇ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ಮೂಡಿಸಿದೆ. ಜೊತೆಗೆ ರಾಜ್ಯದ ಆಡಳಿತ ಪಕ್ಷವಾದ ಸಿಪಿಎಂನಲ್ಲೂ ಗುರುತಿಸಿಕೊಂಡಿರುವ ಇವರು ಇಂತಹ ಅಮಾನವೀಯ ವ್ಯವಹಾರಗಳಿಗೆ ಬೆಂಬಲ ನೀಡಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss