Monday, August 8, 2022

Latest Posts

ಕೇರಳ| ರೇಷನ್ ಕಾರ್ಡ್ ನಲ್ಲಿ ಹೆಸರುಳ್ಳವರು ಆಧಾರ್ ನಂಬರ್ ಲಿಂಕ್ ಮಾಡುವಂತೆ ಸೂಚನೆ

ಕಾಸರಗೋಡು: ಕೇರಳದಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರುಳ್ಳ ಎಲ್ಲರ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕೆಂಬ ನಿರ್ದೇಶನವನ್ನು ಕಡ್ಡಾಯಗೊಳಿಸಲು ರಾಜ್ಯ ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆ ನಿರ್ಧರಿಸಿದೆ. ಒಂದು ದೇಶ ಒಂದು ಕಾರ್ಡ್ ಎಂಬ ಕೇಂದ್ರ ಸರಕಾರದ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿದವರನ್ನು ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರಕಾರವು ಎಲ್ಲ ವಿಭಾಗದವರಿಗೂ ನೀಡಿದ ಉಚಿತ ಅಕ್ಕಿ ಮೊದಲಾದ ಆಹಾರ ಸಾಮಗ್ರಿಗಳನ್ನು ರೇಷನ್ ಕಾರ್ಡ್ ಇಲ್ಲದವರಿಗೂ ಒದಗಿಸುವ ಅಂಗವಾಗಿ ಆನ್ ಲೈನ್ ಮೂಲಕ 24 ಗಂಟೆಯೊಳಗೆ ಕಾರ್ಡ್ ನೀಡುವ ಯೋಜನೆಯನ್ನು ಏಪ್ರಿಲ್ 29ರಂದು ಅನುಷ್ಠಾನಕ್ಕೆ ತರಲಾಗಿತ್ತು. ಈ ರೀತಿಯಲ್ಲಿ 1,34,729 ಮಂದಿ ಕಾರ್ಡ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬೇರೆ ರೇಷನ್ ಕಾರ್ಡ್ ನಲ್ಲಿ ಹೆಸರಿದ್ದವರೂ ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲರ ಆಧಾರ್ ನಂಬರ್ ಗಳನ್ನು ರೇಷನ್ ಕಾರ್ಡ್ ನಲ್ಲಿ ಜೋಡಿಸುವುದರೊಂದಿಗೆ ಈ ಅಕ್ರಮವನ್ನು ಪತ್ತೆಹಚ್ಚಿ ತಪ್ಪಿತಸ್ಥರನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss