Tuesday, August 16, 2022

Latest Posts

ಕೇರಳ ಸಚಿವ ಕೆ.ಟಿ.ಜಲೀಲ್ ರಾಜೀನಾಮೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ: ಕಾರ್ಯಕರ್ತರ ಮೇಲೆ ಜಲಪಿರಂಗಿ ಪ್ರಯೋಗ

ಕಾಸರಗೋಡು: ತಿರುವನಂತಪುರದ ಅಕ್ರಮ ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸ್ಥಾನದಲ್ಲಿರುವ ಕೇರಳ ರಾಜ್ಯ ಉನ್ನತ ಶಿಕ್ಷಣ ಮತ್ತು ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಟಿ.ಜಲೀಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇರಳ ರಾಜ್ಯದಾದ್ಯಂತ ನಡೆಸುತ್ತಿರುವ ಹೋರಾಟದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಬುಧವಾರ ಪ್ರತಿಭಟನಾ ಮಾರ್ಚ್ ಹಮ್ಮಿಕೊಳ್ಳಲಾಯಿತು.
ಎಬಿವಿಪಿ ಜಿಲ್ಲಾ ಅಧ್ಯಕ್ಷ ವೈಶಾಖ್ ಕೊಟ್ಟೋಡಿ ಪ್ರತಿಭಟನೆಯನ್ನು ಉದ್ಘಾಟಿಸಿ, ಸಚಿವರು ರಾಜೀನಾಮೆ ನೀಡುವ ತನಕ ವಿವಿಧ ರೀತಿಯಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದರು.


ಈ ಮಧ್ಯೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲಪಿರಂಗಿ ಪ್ರಯೋಗಿಸಿದ ಪರಿಣಾಮವಾಗಿ ಜಿಲ್ಲಾ ಕಾರ್ಯದರ್ಶಿ ರಾಹುಲ್ ಉದಯಗಿರಿ ಸಹಿತ ಐದು ಅಭಾವಿಪ ಕಾರ್ಯಕರ್ತರು ಗಾಯಗೊಂಡರು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss