ತಿರುವನಂತಪುರ: ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ನಡೆಸುವ ಕೇರಳ ಲೋಕ ಸೇವಾ ಆಯೋಗ (ಪಿಎಸ್ಸಿ )ವು ಸರಕಾರಿ ಸೇವೆಯಲ್ಲಿ ಮುಂದುವರಿದ ವಿಭಾಗಕ್ಕೂ ಮೀಸಲಾತಿ ಜಾರಿಗೆ ತರುವ ಮಹತ್ವದ ನಿರ್ಧಾರ ಕ್ಯೆಗೊಂಡಿದೆ.
ಅಕ್ಟೋಬರ್ 23 ರಿಂದ ನವೆಂಬರ್ 3ರ ವರೆಗೆ ಉದ್ಯೋಗಕ್ಕಾಗಿ ಪಿಎಸ್ ಸಿಗೆ ಅರ್ಜಿ ಸಲ್ಲಿಸಿದವರಿಗೂ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳ್ಳಲಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ವರ್ಗಗಳಿಗೆ ಮೀಸಲಾತಿ ನೀಡುವ ಸರಕಾರದ ಆದೇಶವನ್ನು ಜಾರಿಗೆ ತರಲು ಸೋಮವಾರ ನಡೆದ ಪಿಎಸ್ ಸಿ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ನವೆಂಬರ್ 3ಕ್ಕೆ ಕೊನೆಗೊಳ್ಳುವ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿದವರು ಈ ನೂತನ ಮೀಸಲಾತಿ ಪ್ರಕ್ರಿಯೆಗೆ ಒಳಪಡುವ ನಿಟ್ಟಿನಲ್ಲಿ ಮತ್ತೆ ಅರ್ಜಿ ಸಲ್ಲಿಸಲು ನವೆಂಬರ್ 14 ರ ವರೆಗೆ ಅವಕಾಶ ನೀಡಲಾಗುವುದು. ಮೀಸಲಾತಿ ಸಾಮಾನ್ಯ ವರ್ಗದವರಿಗೆ ಇರುತ್ತದೆ. 4 ಲಕ್ಷ ರೂ. ಗಳ ವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಈ ಯೋಜನೆಯ ಲಾಭ ದೊರಕಲಿದೆ.