Saturday, June 25, 2022

Latest Posts

ಕೇರಳ| ಸಹಕಾರಿ ಸಂಘದ ಸದಸ್ಯರಿಗೆ ಚಿಕಿತ್ಸಾ ಸಹಾಯ ಯೋಜನೆ

ಕಾಸರಗೋಡು: ಗಂಭೀರ ಕಾಯಿಲೆ ತಗಲಿದ ಕೇರಳ ರಾಜ್ಯದ ಎಲ್ಲ ಸಹಕಾರಿ ಸಂಘಗಳ ಸದಸ್ಯರಿಗೆ ಚಿಕಿತ್ಸಾ ಸಹಾಯ ಒದಗಿಸುವ ಯೋಜನೆಯನ್ನು ಸೆಪ್ಟೆಂಬರ್ 1ರಂದು ಆರಂಭಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಂತೆ ಗರಿಷ್ಠ 50 ಸಾವಿರ ರೂಪಾಯಿ ವರೆಗೆ ಧನ ಸಹಾಯ ನೀಡಲಾಗುವುದು. 3 ಲಕ್ಷ ರೂ. ಗಿಂತ ಅಧಿಕ ವಾರ್ಷಿಕ ಆದಾಯ ಇರುವವರಿಗೆ ಈ ಸೌಲಭ್ಯ ದೊರಕದು. ಕ್ಯಾನ್ಸರ್, ಡಯಾಲಿಸಿಸ್, ಹಾಸಿಗೆ ಹಿಡಿದವರಿಗೆ, ಎಚ್ ಐವಿ ಬಾಧಿತರಿಗೆ, ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ, ಕರುಳು ರೋಗ ಬಾಧಿತರು ಮೊದಲಾದವರಿಗೆ ಸಹಾಯ ಲಭಿಸಲಿದೆ.
ವಾಹನ ಅಪಘಾತದಲ್ಲಿ ಅಂಗವೈಕಲ್ಯ ಸಂಭವಿಸಿ ಹಾಸಿಗೆ ಹಿಡಿದಿರುವ, ಮೃತಪಟ್ಟ ಸದಸ್ಯರ ಆಶ್ರಿತರಿಗೆ, ಹೆತ್ತವರು ಸಾಲ ತೆಗೆದು ಅದು ಮಕ್ಕಳಿಗೆ ಹೊರೆಯಾಗಿದ್ದರೆ, ಪ್ರಕೃತಿ ವಿಕೋಪಗಳಿಗೆ ಸಿಲುಕಿ ಮನೆ, ಸೊತ್ತು ನಾಶ ಹೊಂದಿರುವ ಸಹಕಾರಿ ಸಂಘಗಳ ಸದಸ್ಯರಿಗೆ ಸಹಾಯ ದೊರಕಲಿದೆ. 26.79 ಕೋಟಿ ರೂಪಾಯಿ ಮೊತ್ತವನ್ನು ಈ ನಿಟ್ಟಿನಲ್ಲಿ ಮೀಸಲಿರಿಸಲಾಗಿದೆ. ನಿಗದಿತ ಪ್ರಮಾಣದ ಮೊತ್ತ ದಾಖಲಿಸಿ ಆಯಾ ಸಹಕಾರಿ ಸಂಘದಲ್ಲಿ ಅರ್ಜಿ ಸಲ್ಲಿಸಬೇಕು. ಸಹಕಾರಿ ಇಲಾಖೆ ಕಚೇರಿಗಳಲ್ಲಿ ಅರ್ಜಿಗಳು ದೊರೆಯಲಿವೆ. ಆದಾಯ ಪ್ರಮಾಣ ಪತ್ರ , ಭಾವಚಿತ್ರ ಲಗತ್ತಿಸಿದ ಗುರುತುಚೀಟಿಗಳ ದೃಢೀಕರಿಸಿದ ಪ್ರತಿ, ಅಂಗೀಕೃತ ಮೆಡಿಕಲ್ ಆಫೀಸರಿಂದ ಲಭಿಸಿದ ಮೆಡಿಕಲ್ ಪ್ರಮಾಣಪತ್ರ , ಚಿಕಿತ್ಸಾ ಪ್ರಮಾಣಪತ್ರ , ಇತರ ಸಂಬಂಧಿತ ದಾಖಲೆಗಳು, ಹಕ್ಕುದಾರರಾಗಿದ್ದರೆ ಅದಕ್ಕಿರುವ ಪ್ರಮಾಣಪತ್ರದ ಪ್ರತಿ ಇತ್ಯಾದಿಗಳನ್ನು ನೀಡಬೇಕು. ಇದೊಂದು ಮುಂದುವರಿಕಾ ಯೋಜನೆಯಾದ ಕಾರಣ ಅರ್ಹರಾದವರು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss