Thursday, July 7, 2022

Latest Posts

ಕೇರಳ| SSLC ಮತ್ತು Plus 2 ಪರೀಕ್ಷೆಗಳ ಪುನರ್ ನವೀಕರಣ – ಮೇ 26 ರಿಂದ ನಡೆಯಲಿದೆ ಪರೀಕ್ಷೆ

ಕಾಸರಗೋಡು: ಕೋವಿಡ್ – 19 ಲಾಕ್ ಡೌನ್ ಕಾರಣದಿಂದಾಗಿ ಬಾಕಿ ಉಳಿದಿರುವ ಕೇರಳ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳನ್ನು ನಡೆಸುವ ದಿನಾಂಕಗಳನ್ನು ಪುನರ್ ನವೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇ 26 ರಿಂದ ಮೂರು ದಿನಗಳ ವರೆಗೆ ಈ ಪರೀಕ್ಷೆಗಳು ನಡೆಯಲಿವೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮೇ 26 ರಿಂದ ಮೂರು ದಿನಗಳ ವರೆಗೆ ಜರಗಲಿದೆ. ಪರೀಕ್ಷೆ ಮಧ್ಯಾಹ್ನ ಆರಂಭಗೊಳ್ಳುತ್ತದೆ. ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಪ್ಲಸ್ ಟು ಪರೀಕ್ಷೆಗಳು ಮೇ 26 ರಿಂದ 30ರ ವರೆಗೆ ನಡೆಯಲಿದೆ. ಈ ದಿನಗಳಲ್ಲಿ ಪ್ಲಸ್ ಒನ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಗಳು ಮೇ 26, 27 ಮತ್ತು 28 ರಂದು ಬೆಳಗ್ಗೆ ಮತ್ತು 29 ಹಾಗೂ 30 ರಂದು ಮಧ್ಯಾಹ್ನ ಜರಗಲಿದೆ.

ಪರೀಕ್ಷೆಯು ಸಂಪೂರ್ಣವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಯೋಜನೆಗೊಳ್ಳಲಿದೆ. ಇದನ್ನು ಸ್ಪಷ್ಟಪಡಿಸಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss