ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೆ ಬಂಗಾಳ ಜನತೆ ‘ನಮಸ್ತೆ’ ಹೇಳಲು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಶಹಾಪುರದಲ್ಲಿ ರೈತರನ್ನು ಉದ್ದೇಶಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಮತಾ ದೀದಿ ಅವರೇ, ಬಂಗಾಳ ಜನತೆ ನಿಮಗೆ ಕೈಮುಗಿದು ನಮಸ್ತೆ ಹೇಳಲು ತೀರ್ಮಾನಿಸಿದ್ದಾರೆ.
ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಮಮತಾ ದೀದಿ ಬಂಗಾಳದಲ್ಲಿ ಜಾರಿಗೊಳಿಸಿಲ್ಲ. ಇದರಿಂದ ಲಕ್ಷಾಂತರ ರೈತರು ವಂಚನೆಗೆ ಒಳಗಾಗಿದ್ದಾರೆ ಎಂದರು.
ಬಂಗಾಳದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯನ್ನು ಬೆಂಬಲಿಸುವಂತೆ ರೈತರ ಮನವೋಲೈಸಿದ ನಡ್ಡಾ ಅವರು, ಬಂಗಾಳದವರು ಪ್ರಧಾನಿ ಮೋದಿಯವರನ್ನು ಆಶೀರ್ವದಿಸಿ ಕಮಲ ಅರಳಿಸಿದರೆ ರಾಜ್ಯ ಅಭಿವೃದ್ಧಿ ಕಾಣಲಿದೆ ಎಂದರು.
ಬಳಿಕ ರೈತರ ಜೊತೆಯಲ್ಲಿಯೇ ಕುಳಿತು ಊಟ ಮಾಡಿದ ನಡ್ಡಾ ಅವರು, ಕಾರ್ಯಕ್ರಮದ ಬಗ್ಗೆ ಟ್ವಿಟ್ ಮಾಡಿದ್ದಾರೆ, ರೈತ ಸುರಕ್ಷತಾ ಸಹಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರೈತ ಸಹೋದರರೊಂದಿಗೆ ಊಟ ಮಾಡುವ ಭಾಗ್ಯ ನನಗೆ ದೊರಕಿತು ಎಂದಿದ್ದಾರೆ.
कृषक सुरक्षा सहभोज कार्यक्रम में सम्मिलित होकर कृषक बंधुओं के साथ भोजन करने का सौभाग्य प्राप्त हुआ।
मोदी सरकार द्वारा किसानों को सशक्त करने वाली योजनाओं पर प. बंगाल के कृषक भाई-बहनों का भी बराबर अधिकार है, जिसको सुनिश्चित करने के लिए भाजपा प्रतिबद्ध है। pic.twitter.com/GkSmwLLEhC
— Jagat Prakash Nadda (@JPNadda) February 6, 2021