ಉತ್ತಮ ಕೇಳುವಿಕೆ ಒಳ್ಳೆಯ ಮಾತನಾಡುವ ಕೌಶಲ್ಯವನ್ನು ಕಲಿಸುತ್ತದೆ. ಕೇಳುವ ಕೌಶಲ್ಯ ಯಶಸ್ಸಿನ ಸೂತ್ರಗಳಲ್ಲೊಂದು. ಈ ಕೆಳಗೆ ಬರೆದಿರುವ ಟಿಪ್ಸ್ ಟ್ರೈ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ಒಳ್ಳೆಯ ಮಾತುಗಾರರಾಗುತ್ತೀರಿ..
- ಮಾತನಾಡುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಮಾತನಾಡುವ ವಾತಾವರಣ ಸೃಷ್ಟಿಸಿ.
- ಹೇಳುತ್ತಿರುವವರ ಮಾತು ಪೂರ್ತಿಯಾಗುವ ಮೊದಲು, ವಿನಾಕಾರಣ ಪ್ರಶ್ನೆ, ಸಲಹೆ ಉತ್ತರಗಳನ್ನು ನೀಡಲು ಹೋಗಬೇಡಿ.
- ಮಾತನಾಡುವುದು ಸುಲಭ. ಆದರೆ ಕೇಳುವುದು ಕಷ್ಟ. ತಾಳ್ಮೆಯಿಂದ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಿ.
- ತಕ್ಷಣ ಪ್ರತಿಕ್ರಿಯಿಸ ಬೇಡಿ. ಅವರು ಹೇಳಿದ್ದನ್ನು ಆಲೋಚಿಸಿ ನಂತರ ಪ್ರತಿಕ್ರಿಯಿಸಿ.
- ಮಾತನಾಡುತ್ತಿರುವವರ ಧ್ವನಿಯ ಏರಿಳಿತವನ್ನು ಗಮನಿಸಿ.
- ಮಾತನಾಡುವವರ ಹಾವ, ಭಾವ, ಶೈಲಿ, ಭಾಷೆ ಬಳಕೆ, ಕಣ್ಣುಗಳು, ತುಟಿಗಳು ಮತ್ತು ಮುಖದ ಚಲನೆ ಹೀಗೆ ಇಡೀ ಮಾತನಾಡುವ ಒಂದು ಪ್ರಕ್ರಿಯೆಯನ್ನು ಅವಲೋಕಿಸಿ, ನಿಮ್ಮ ಮಾತಿಗೆ ಮುನ್ನುಡಿ ಬರೆಯಿರಿ.
- ನೀವು ಮಾತಿನ ಮಧ್ಯ ಪ್ರಶ್ನೆ ಕೇಳುವುದಿದ್ದರೆ ಒಂದು ನಿಮಿಷ ವಿನಂತಿಸಿ ನಂತರ ಪ್ರಶ್ನೆ ಕೇಳಿ.