Monday, August 8, 2022

Latest Posts

ಕೈಗಾರಿಕೆ ಸ್ಥಾಪಿಸದಿದ್ದರೆ ರೈತರಿಗೆ ಜಮೀನು ವಾಪಸ್: ಸಚಿವ ಜಗದೀಶ ಶೆಟ್ಟರ್ ಭರವಸೆ

ಧಾರವಾಡ: ಭೂಸ್ವಾಧೀನ ಕಾಯ್ದೆ, ಕರ್ನಾಟಕ ಕೈಗಾರಿಕಾ ಕಾಯ್ದೆ ತಿದ್ದುಪಡಿ ತರುವ ಮೂಲಕ ರೈತರಿಗೆ ಹಾಗೂ ಕೈಗಾರಿಕೆ ಸ್ಥಾಪಕರಿಗೆ ಬಹಳಷ್ಟು ಅನಕೂಲ ಕಲ್ಪಿಸಿದೆ. ಕೆಐಡಿಬಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಈ ಕಾಯ್ದೆಗಳ ಅನ್ವಯ ಅವಧಿಯೊಳಗೆ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೆ, ಆ ಜಮೀನು ಮರಳಿ ರೈತರಿಗೆ ಒದಗಿಸುವುದಾಗಿ ಬೃಹತ್-ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಮುಂದೆ ಸಾಕಷ್ಟು ಸಾವಾಲುಗಳಿವೆ. ಹೊಸ ಕೈಗಾರಿಕಾ ನೀತಿ ಅನುಮೋದನೆಗೊಂಡು ರಾಜ್ಯಕ್ಕೂ ವಿಸ್ತರಿಸಿದೆ. ಇದರಿಂದ ಹಿಂದುಳಿದ ಜಿಲ್ಲೆಗಳನ್ನು ಝೋನ್ ಒಂದರಲ್ಲಿ ಸೇರ್ಪಡಿ ಆ ಪ್ರದೇಶಗಳ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಗದಗ, ಹಾವೇರಿ, ಬೆಳಗಾವಿ, ಧಾರವಾಡ ಒಳಗೊಂಡ ವಿಶೇಷ ಹೂಡಿಕೆಗೆ(ಎಸ್.ಐ.ಆರ್.) ಆದ್ಯತೆ ನೀಡಿದೆ ಎಂದರು.
ಕೊರೋನಾದಿoದ ಬಹುತೇಕ ಸಣ್ಣ ಕೈಗಾರಿಕೆಗಳು ದೀವಾಳಿಯಾಗಿ ಮುಚ್ಚಲ್ಪಟ್ಟಿವೆ. ಇವಗಳ ಪುನಃಶ್ಚೇತನಕ್ಕೆ ಸರ್ಕಾರ ರೂ.2,300 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಕೈಗಾರಿಕೆ ಇಲಾಖೆ ಬೇಡಿಕೆಯಂತೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ರೂ.20 ಲಕ್ಷ ಕೋಟಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಒದಗಿಸಿದೆ. ಅಲ್ಲದೇ, ಎರಡು ತಿಂಗಳ ವಿದ್ಯುತ್ ಬಿಲ್ ಮರುಪಾವತಿ ಮಾಡಿದೆ ಎಂದರು.
ಕೈಗಾರಿಕೆಗಳ ಸ್ಥಾಪನೆ, ಅಭಿವೃದ್ಧಿ ಹಾಗೂ ಪುನಃಶ್ಚೇತನ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲಿ ಕಾಯ್ದೆಗಳಿಗೆ ಸಾಕಷ್ಟ ತಿದ್ದಪಡಿ ತರುವ ಮೂಲಕ ಸರಳೀಕರಣಗೊಳಿಸಿದೆ. ಎಫ್.ಎಂ.ಸಿ.ಜಿ ಅಡಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಹುಬ್ಬಳ್ಳಿಯಲ್ಲಿ ಹೂಡಿಕೆಗೆ ಈಗಾಗಲೇ ಸಭೆ ನಡೆಸಿದೆ. ಹೂಡಿಕೆ ಮಾಡಲು ಅನೇಕ ಕಂಪೆನಿಗಳು ಮುಂದೆ ಬಂದಿವೆ. ಇಂತಹ ಕೈಗಾರಿಕೆಗಳಿಗೆ ಸರ್ಕಾರದ ಹಲವು ಸೌಲಭ್ಯಗಳು ದೊರೆಯಲಿವೆ ಎಂದರು.
ಕೈಗಾರಿಕೆಗಳಲ್ಲಿ ಕೊರೋನಾ ಪಾಸಿಟವ್ ಹಿನ್ನಲೆ ಅಗತ್ಯ ಮುನ್ನಚ್ಚರಿಕೆ ವಹಿಸಲು ಸೂಚಿಸಿದೆ. ಮಾಸ್ಕ್ ಧಾರಣೆ, ಸ್ಯಾನಿಶೈನ್ ಬಳಕೆ, ಸಾಮಾಜಿ ಅಂತರ ಕಾಯಬೇಕಿದೆ. ಮಾರ್ಕೋಫೊಲೋ ಕಾರ್ಮಿಕರಲ್ಲಿ ಪಾಸಿಟಿವ್ ಬಂದ ಕಾರಣ 8 ದಿನ ಕಂಪೆನಿ ಚಟವಟಿಕೆ ಸ್ಥಗತಕ್ಕೆ ಕಂಪೆನಿ ಸಿಇಓ ಸಮ್ಮತಿಸಿದ್ದಾರೆ. ಜಿಲ್ಲೆಯ 40 ವೆಂಟಿಲೇಟರ್ ಪೈಕಿ 17 ಸದ್ಬಳಿಸಿದ್ದು, ಇನ್ನೂ 30 ವೆಂಟಿಲೇಟರ್ ಬರಬೇಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ.ನಿAಬಣ್ಣವರ, ಮುಖ್ಯಮಂತ್ರಿ ರಾಜ್ಯಕೀಯ ಕಾರ್ಯದರ್ಶಿ ಮೋಹನ್ ಲಿಂಬಿಕಾಯಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss