spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, September 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೈಲಾದ ಸಹಾಯ ಮಾಡಿದಾಗ ಮಾತ್ರ ಜನ್ಮ ಸಾರ್ಥಕ: ಸಮಾಜ ಸೇವಕ ಎಲೆಕೇರಿ ಧನುಕುಮಾರ್

- Advertisement -Nitte

ರಾಮನಗರ: ಪ್ರತಿಯೊಬ್ಬರು ಸಹಕಾರ ಮನೋಭಾವನೆಯನ್ನು ಹೊಂದಿ ಕೈಲಾದ ಸಹಾಯ ಮಾಡಿದಾಗ ಅವರ ಜನ್ಮ ಸಾರ್ಥಕವಾಗುತ್ತದೆ ಎಂದು ಸಮಾಜ ಸೇವಕ ಎಲೆಕೇರಿ ಧನುಕುಮಾರ್ ತಿಳಿಸಿದರು.
ಅವರು ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ಶಿರಡಿ ಸಾಯಿಬಾಬಾ ವೃದ್ದಾಶ್ರಮದಲ್ಲಿ ಆಯೋಜಿಸಲಾಗಿದ್ದ ತಮ್ಮ ಪುತ್ರಿಯ ಜನ್ಮದಿನಾಚರಣೆಯಲ್ಲಿ ಆಶ್ರಮಕ್ಕೆ ವಿವಿಧ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಕಣ್ಣಿಗೆ ಕಾಣುವ ದೇವರುಗಳಾಗಿರುವ ವೃದ್ದ ಜೀವಗಳನ್ನು ಹಾರೈಕೆ ಮಾಡಿ ಪೂಜಿಸುವ ದಿನಗಳಲ್ಲಿ ಮಾನವೀಯತೆಯನ್ನು ಮರೆತು ವೃದ್ದ ಜೀವಗಳನ್ನು ದೂರ ತಳ್ಳುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳು, ಮೊಮ್ಮಕ್ಕಳು ಕುಟುಂಬದವರೊಂದಿಗೆ ಕೊನೆಯ ದಿನಗಳನ್ನು ಕಾಣಬೇಕಾದ ವೃದ್ದಜೀವಗಳು ತಮ್ಮವರಿಂದಲೇ ದೂರಾಗಿ ಸಾವಿನ ಹಾದಿ ತುಳಿಯುವ ಸಂದರ್ಭದಲ್ಲಿ ವೃದ್ದರ ಪಾಲಿಗೆ ಬೆಳಕಾಗಿರುವ ಶ್ರೀ ಶಿರಡಿ ಸಾಯಿಬಾಬಾ ವೃದ್ದಾಶ್ರನದಲ್ಲಿ ಸೇವೆ ಅದರಲ್ಲೂ ವೃದ್ದಾಶ್ರಮದ ರೂವಾರಿ ಹರೀಶ್ ಹೆಗ್ಗಡೆ ರವರ ಸೇವೆ ನಿಜಕ್ಕೂ ಪ್ರಶಂಸನೀಯವೆಂದರು.
ತಮ್ಮ ಪುತ್ರಿಯ ಜನ್ಮ ದಿನವನ್ನು ಎಲ್ಲೋ ಆಚರಣೆ ಮಾಡಿ ಅನಾವಶ್ಯಕವಾಗಿ ದುಂದು ವೆಚ್ಚ ಮಾಡುವ ಬದಲು ಮಕ್ಕಳಿಗೆ, ವೃದ್ದ ಜೀವಗಳನ್ನು ಪರಿಚಯ ಮಾಡಿಸಿ ವಸ್ತುಸ್ಥಿತಿ ತಿಳಿಸಿದಾಗ ಮುಂದಿನ ದಿನಗಳಲ್ಲಿ ಅಂದಿನ ಪಾಠ ದೊರೆತಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಶ್ರಮದ ರೂವಾರಿ ಹರೀಶ್ ಹೆಗ್ಗಡೆ, ಅಧ್ಯಕ್ಷ ನಾಗೇಶ್, ಶಿಕ್ಷಕ ಹರೀಶ್ ಹಾಗೂ ಹಲವಾರು ಮಂದಿ ಹಾಜರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss