Monday, July 4, 2022

Latest Posts

ಕೈ ಕೊಟ್ಟ ಲಿಫ್ಟ್ , ಎರಡು ತಾಸು ದಿಕ್ಕು ತೋಚದೆ ಪಜೀತಿ ಪಟ್ಟ ಬಾಲಕಿಯರು!

ಹೊಸದಿಗಂತ ಆಲ್ ಲೈನ್ ಡೆಸ್ಕ್

ವಸತಿ ಸಮುಚ್ಚಯವೊಂದರಿಂದ ದಿನಪಯೋಗಿ ವಸ್ತುಗಳ ಖರೀದಿಗಾಗಿ ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಅಡಚಣೆಯಿಂದ ಲಿಫ್ಟ್ ನಲ್ಲಿಯೇ ಎರಡು ತಾಸು ಸಿಲುಕಿದ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ.
ನೇರಳಕಟ್ಟೆ ಗ್ರಾ.ಪಂ. ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಅವರ ಮಗಳು ಫಿದಾನೈನ (15) ಲತೀಫ್ ಅವರ ಸಂಬಂಧಿಕ ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಮಯಿಷೀನಾ (14) ಹಾಗೂ ನೇರಳಕಟ್ಟೆ ನಿವಾಸಿ ರಝಾಕ್ ಅವರ ಮಗಳು ಸಿಯಾನಾ(13) , ನೇರಳಕಟ್ಟೆ ನಿವಾಸಿ ಅಹಮ್ಮದ್ ಅವರ ಮಗಳು ಅಪ್ರಾ ( 19) ಅವರು ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಬಾಲಕಿಯರು.
ಫಿದಾನೈನ ಅವಳ ಸಂಬಂಧಿ ಮಕ್ಕಳು ಮನೆಯಿಂದ ಅಂಗಡಿಗೆ ಸಾಮಗ್ರಿಗಳ ತರಲೆಂದು ವಸತಿ ಸಂಕೀರ್ಣ ದ ಲಿಫ್ಟ್ ಮೂಲಕ ಕೆಳಗೆ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದ ಲಿಫ್ಟ್ ಅರ್ಧದಲ್ಲಿ ಕೆಟ್ಟು ಹೋಗಿದೆ.
ಬಾಲಕಿಯರು ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು , ಮನೆಮಂದಿ ಜೊತೆಗೆ ಸ್ಥಳೀಯರು ಲಿಪ್ಟ್ ನ್ನು ಅರ್ಧ ಓಪನ್ ಮಾಡಿ ಅವರಿಗೆ ಟೇಬಲ್ ಫ್ಯಾನ್ ಮೂಲಕ ಗಾಳಿಯ ವ್ಯವಸ್ಥೆ ಮಾಡಿಕೊಟ್ಟರು.
ಲಿಫ್ಟ್ ಸಂಸ್ಥೆಯ ಕಾರ್ಮಿಕರು ಸ್ಥಳಕ್ಕಾಗಮಿಸಿ ತಾಂತ್ರಿಕ ದೋಷ ಸರಿಪಡಿಸಿದ್ದು , ಸುಮಾರು ರಾತ್ರಿ 7.15 ರ ಹೊತ್ತಿಗೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಎಸ್.ಐ. ಅವಿನಾಶ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss