Monday, August 15, 2022

Latest Posts

ಕೈ ಪಕ್ಷದವರಿಗೆ ಕಾನೂನು ಉಲ್ಲಂಘನೆ ಮಾಡುವುದೇ ದೊಡ್ಡ ಸಾಧನೆ: ಸಚಿವ ಆರ್. ಅಶೋಕ

ಬೆಳಗಾವಿ : ಕಾಂಗ್ರೆಸ್ ನವರಿಗೆ ಕಾನೂನನ್ನು ಉಲ್ಲಂಘನೆ ಮಾಡುವುದೇ ದೊಡ್ಡ ಸಾಧನೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಅವರು ಸೋಮವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣೆ ಘೋಷಣೆಯಾದ ನಂತರ ಆ ಕ್ಷೇತ್ರ ಚುನಾವಣಾ ಆಯೋಗದ ಅಧೀನದಲ್ಲಿ ಬರುತ್ತದೆ. ಸೋಲುವ ಭಯದಲ್ಲಿ ಸರ್ಕಾರದ ಮೇಲೆ ಗೂಬೆ ಕೂಡಿಸುವ ಆರೋಪವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಕಾಮನ್ ಸೆನ್ಸ್ ಇಲ್ವಾ.. ಯಾರು ಪ್ರಕರಣ ದಾಖಲಿಸುತ್ತಾರೆ ಎಂದು ಕಾಂಗ್ರೆಸ್ ನವರಿಗೆ ತಿಳಿಯುವುದಿಲ್ವಾ ಎಂದರೆ ಹಾಸ್ಯಾಸ್ಪದ ಎಂದರು.

ಆರ್. ಆರ್. ನಗರದ ಚುನಾವಣೆಯ ಉಸ್ತುವಾರಿ ನಾನೇ ಇದ್ದೇನೆ. ಅಲ್ಲಿ 9 ವಾಡ್೯ನ‌ ಕಾಂಗ್ರೆಸ್ ನರು‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಪಿಲ್ಡ್ ಗೆ ಇಳಿದರೂ ಯಾರು ಸಿಗುತ್ತಿಲ್ಲ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದರು.

ಕೋವಿಡ್ ‌ನಲ್ಲಿ ಅವ್ಯವಹಾರ ಮಾಡುವುದು ದೇವರಿಗೆ ಮೋಸ‌ ಮಾಡಿದ ಹಾಗೆ, ರಾಯಬಾಗ ತಹಶಿಲ್ದಾರ ಅವ್ಯವಹಾರ ಮಾಡಿದರೆ ಒಂದು ದಿನವೂ ಕಾಯದೆ ಮುಲಾಜಿಲ್ಲದೆ ತೆಗೆದು ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಆರ್.ಅಶೋಕ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss