Wednesday, July 6, 2022

Latest Posts

ಕೊಚ್ಚಿಯಲ್ಲಿ ಗ್ಲೈಡರ್ ವಿಮಾನ ಪತನ: ಇಬ್ಬರು ನೌಕಾಪಡೆ ಅಧಿಕಾರಿಗಳು ನಿಧನ

ಕೊಚ್ಚಿ: ತರಬೇತಿ ಸಂದರ್ಭ ಪವರ್ ಗ್ಲೈಡರ್ ನಿಯಂತ್ರಣ ಕಳೆದುಕೊಂಡು ಕೆಳಕ್ಕುರುಳಿ ಇಬ್ಬರು ನೌಕಾಧಿಕಾರಿಗಳು ಸಾವನ್ನಪ್ಪಿದ ಘಟನೆ ಕೊಚ್ಚಿಯಲ್ಲಿ ಭಾನುವಾರ ನಡೆದಿದೆ.

ಡೆಹ್ರಾಡೂನ್ ನ ಲೆಫ್ಟಿನೆಂಟ್ ರಾಜೀವ್ ಜ್ಹಾ (39), ಬಿಹಾರದ ಬೊಜ್ ಮೂಲದ ಸುನಿಲ್ ಕುಮಾರ್ (29) ಮೃತಪಟ್ಟವರು.
ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದಕ್ಷಿಣ ನೌಕಾ ಕಮಾಂಡ್ ನ ನೌಕಾ ವಾಯು ಕೇಂದ್ರ ಐಎನ್ಎಸ್ ಗರುಡಾದಿಂದ ಗ್ರೈಡರ್ ಟೇಕ್ ಆಫ್ ಆದ ಈ ಗ್ಲೈಡರ್, ಹಾರಾಟ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲಿಯೇ ತಾಂತ್ರಿಕ ದೋಷ ಕಂಡುಬಂದು ಬೆಳಗ್ಗೆ 7.15ರ ಹೊತ್ತಿಗೆ ತೊಪ್ಪುಂಪಾಡಿಯಲ್ಲಿ ಬಿಒಟಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಯಿತು.

ಬೆಳಗಿನ ವಾಕಿಂಗ್ ಹೋಗುತ್ತಿದ್ದ ಜನರು ಗ್ಲೈಡರ್ ಡಿಕ್ಕಿ ಹೊಡೆದಿದ್ದನ್ನು ಕಂಡು ಬಂದರು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ನೌಕಾಪಡೆ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿ ಇಬ್ಬರು ಅಧಿಕಾರಿಗಳನ್ನು ಐಎನ್ಎಸ್ ಸಂಜೀವಿನಿ ನೌಕಾ ಆಸ್ಪತ್ರೆಗೆ ವರ್ಗಾಯಿಸಿದರು. ತೀವ್ರವಾಗಿ ಗಾಯಗೊಂಡಿದ್ದ ನೌಕಾಪಡೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss