ಹೊಸ ದಿಗಂತ ವರದಿ ಮಡಿಕೇರಿ:
ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವ ಘಟನೆ ಬಾಳೆಲೆ ಸಮೀಪದ ಕೊಟ್ಡಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕೊಟ್ಟಗೇರಿ ಗ್ರಾಮದ ಮೆಚ್ಚಿಯಂಡ ಸಾಬು ಎಂಬವರ ಮೇಯಲು ಬಿಟ್ಡಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಸುವು ಸುಮಾರು 60,000ರೂ. ಬೆಲೆಬಾಳುವುದೆಂದು ಹೇಳಲಾಗಿದೆ.
ಕಳೆದ 10 ದಿನದ ಹಿಂದೆಯಷ್ಟೇ ಬಾಳೆಲೆ ಗ್ರಾಮದಲ್ಲಿ ಹುಲಿಯೊಂದು ಉರುಳಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಗುರುವಾರ ನಡೆದ ಹುಲಿ ದಾಳಿಯಿಂದಾಗಿ ಗ್ರಾಮದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.