ಹೊಸ ದಿಗಂತ ವರದಿ, ನಾಗಮoಗಲ:
ವಾಸದ ಮನೆಗೆ ಹೊಂದಿಕೊoಡoತಿದ್ದ ಕೊಟ್ಟಿಗೆಯಲ್ಲಿ ಅಕ್ರವಾಗಿ ದಾಸ್ತಾನು ಮಾಡಲಾಗಿದ್ದ ಮದ್ಯವಶಪಡಿಸಿಕೊಂಡಿರುವ ಅಧಿಕಾರಿಗಳು, ಓರ್ವನನ್ನು ಬಂಧಿಸಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿ ಬುರುಡುಗುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ರೂ.20 ಸಾವಿರ ಮೌಲ್ಯದ ಮದ್ಯವನ್ನು ಶೇಖರಿಸಲಾಗಿದ್ದ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ನಿರೀಕ್ಷಕ ಜ್ಞಾನಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿದರು. ಆರೋಪಿ ನಾಗರಾಜುನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.
ದಾಳಿಯಲ್ಲಿ ಅಬಕಾರಿ ಸಿಬ್ಬಂದಿಗಳಾದ ದೇವರಾಜು, ಮಹದೇವಸ್ವಾಮಿ, ಶಶಿಧರ್ ಹಾಗೂ ಕೇಶವಮೂರ್ತಿ ಸೇರಿದಂತೆ ಮತ್ತಿತರರಿದ್ದರು.