Thursday, August 11, 2022

Latest Posts

ಕೊಡಗಿನಲ್ಲಿ ಕೊರೋನಾ ಸೋಂಕಿತರ ಬಿಡುಗಡೆ ಪ್ರಮಾಣ ಶೇ.76ಕ್ಕೆ ಏರಿಕೆ

ಮಡಿಕೇರಿ: ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇಕಡಾ 76ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐ.ಸಿ.ಯು. ವಿಭಾಗದ ಹಾಸಿಗೆ ಸಾಮಥ್ರ್ಯವನ್ನು 56ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ ಐ.ಸಿ.ಯು. ವಿಭಾಗವನ್ನು ಅನಸ್ತೇಶಿಯಾ ವಿಭಾಗದಿಂದ ನಿಭಾಯಿಸಲಾಗುತ್ತಿದ್ದು, ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ ದಾದಿಯರಿಗೆ ತರಬೇತಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 368 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ಮಾಹೆಯಲ್ಲಿ 30 ಮಂದಿ ಕೋವಿಡ್ ಐ.ಸಿ.ಯು.ನಲ್ಲಿ ದಾಖಲಾಗಿರುತ್ತಾರೆ. 2 ಪ್ರಕರಣದಲ್ಲಿ ಮೃತರಾಗಿದ್ದು, ಹಾಲಿ 5 ಮಂದಿ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 23 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss