Monday, July 4, 2022

Latest Posts

ಕೊಡಗಿನಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಿಂದ ಮರೆಯಾಗಿದ್ದ ಮುಂಗಾರು ಬುಧವಾರದಿಂದ ಮತ್ತೆ ಕಾಣಿಸಿಕೊಂಡಿದೆ.
ಬುಧವಾರ ಬೆಳಗಿನಿಂದ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 8.70 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 3.13 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 0.73 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 4.19 ಮಿ.ಮೀ ಮಳೆಯಾದಂತಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 8.20, ಸಂಪಾಜೆ 11.20, ಭಾಗಮಂಡಲ 15.40, ವೀರಾಜಪೇಟೆ ಕಸಬಾ 3.60, ಹುದಿಕೇರಿ 4, ಶ್ರೀಮಂಗಲ 1, ಪೊನ್ನಂಪೇಟೆ 6.20, ಬಾಳೆಲೆ 4, ಸೋಮವಾರಪೇಟೆ ಕಸಬಾ 1.60, ಶಾಂತಳ್ಳಿ 1.80, ಸುಂಟಿಕೊಪ್ಪ 1 ಮಿ.ಮೀ.ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ 569.14 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 329.91 ಮಿ.ಮೀ.) ವೀರಾಜಪೇಟೆ ತಾಲೂಕಿನಲ್ಲಿ 274.21 ಮಿ.ಮೀ. (298.27 ಮಿ.ಮೀ.) ಸೋಮವಾರಪೇಟೆ ತಾಲೂಕಿನಲ್ಲಿ 180.18 ಮಿ.ಮೀ. (142.77 ಮಿ.ಮೀ.) ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 341.18 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 256.98 ಮಿ.ಮೀ.) ಮಳೆಯಾದಂತಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ 2839.44 ಅಡಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2808.07 ಅಡಿ ನೀರು ಸಂಗ್ರಹವಾಗಿತ್ತು. ಪ್ರಸಕ್ತ ಜಲಾಶಯಕ್ಕೆ 861 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 280 ಕ್ಯುಸೆಕ್‍ನಷ್ಟಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss