Sunday, August 14, 2022

Latest Posts

ಕೊಡಗಿನಲ್ಲಿ ಮತ್ತೆ 16 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ 16 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ವೀರಾಜಪೇಟೆಯ ಕುಟ್ಟದ ಪೂಜೆಕಲ್ಲುವಿನ 65 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 14 ವರ್ಷದ ಬಾಲಕ,ವೀರಾಜಪೇಟೆಯ ಕುಟ್ಟಂದಿಯ 48 ವರ್ಷದ ಪುರುಷ, ಸೋಮವಾರಪೇಟೆಯ ದೊಡ್ಡ ಹನಕೋಡುವಿನ 55 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.

ಚೆಟ್ಟಳ್ಳಿ ಭೂತನಕಾಡುವಿನ 45 ವರ್ಷದ ಮಹಿಳೆ, ಸೋಮವಾರಪೇಟೆ ಒಂಟಿ ಅಂಗಡಿ ಅಭ್ಯತ್ ಮಂಗಲದ 25 ವರ್ಷದ ಮಹಿಳೆ,ಕುಶಾಲನಗರದ ತೊರೆನೂರುವಿನ 44 ವರ್ಷದ ಮಹಿಳೆ ವೀರಾಜಪೇಟೆ ವಿಜಯನಗರದ 23 ವರ್ಷದ ಮಹಿಳೆ,ರಾಜಪೇಟೆ ತೆಲುಗರ ಬೀದಿಯ 52 ವರ್ಷದ ಪುರುಷ, ,ವೀರಾಜಪೇಟೆಯ ಪೆರುಂಬಾಡಿಯ 55 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ, ಕುಶಾಲನಗರದ ತೊರೆನೂರುವಿನ 50 ವರ್ಷದ ಪುರುಷ, ಗೋಣಿಕೊಪ್ಪಲುವಿನ ಅಚ್ಚಪ್ಪ ಲೇಔಟ್ ನ 37 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಟ್ಟಡದ ಬಳಿಯ 36 ವರ್ಷದ ಪುರುಷ,ಮಡಿಕೇರಿಯ ಪೊಲೀಸ್ ವಸತಿ ಗೃಹದ 47ವರ್ಷದ ಪುರುಷ,ಮಡಿಕೇರಿಯ ಹೈವೇ ಹೊಟೇಲ್ ಹಿಂಭಾಗದ 25 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ 610 ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಆಗಿದ್ದು,ಈ ಪೈಕಿ 369ಮಂದಿ ಗುಣಮುಖರಾಗಿದ್ದಾರೆ. 231ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 169 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss