ಕೊಡಗಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ: ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮಾಹಿತಿ

0
74

ಮಡಿಕೇರಿ: ಕೊಡಗಿನಲ್ಲಿ ಆರೋಗ್ಯ ಸ್ಥಿತಿ ಯೋಗ್ಯವಾಗಿದೆ. ಯಾವುದೇ ಆತಂಕ ಇಲ್ಲ. ಎಲ್ಲವೂ ನಿಯಂತ್ರಣದಲ್ಲಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ

ಜನರ ಅನುಕೂಲಕ್ಕೆ ತಕ್ಕಂತೆ ಕರ್ಫ್ಯೂ ಸಡಿಲಿಕೆ ದಿನದಲ್ಲಿ ಕೊಡಗು ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟಿನ ಪಟ್ಟಿಯನ್ನು ತಿಳಿಸಿದರು:

 • ಮೀನು ಹೊರತು ಪಡಿಸಿ ಉಳಿದ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
 • ಕಾಫೀ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಗಡಿ ರಾಜ್ಯಗಳಿಗೆ ಕಾಫಿ, ಕರಿಮೆಣಸು ಕೊಂಡೊಯ್ಯಲು ಅನುಮತಿ ನೀಡಲಾಗಿದೆ.
 • ವಾರದ ಎಲ್ಲಾ ದಿನದಲ್ಲಿ ಬೆಳಗ್ಗೆ 6 ರಿಂದ 8ರವರೆಗೆ ಹಾಲು, ಪತ್ರಿಕೆ ವಿತರಣೆಗೆ ಅವಕಾಶ.
 • ಸೋಮವಾರ ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಿಕೊಳ್ಳಲಾಗಿದೆ.
 • ಮನೆಯಲ್ಲಿ ಕಾಫಿ ಶೇಖರಿಸಿಟ್ಟ ಬೆಳಗಾರರಿಗೆ ಕಾಫಿ ಮಾರಲು ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಲಿದೆ.
 • 1900 ಮಂದಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಪಡಿತರ ವ್ಯವಸ್ಥೆ ಮಾಡಲಾಗಿದೆ.
 • ಜಿಲ್ಲಾಸ್ಪತ್ರೆಯಲ್ಲಿ 10 ವೆಂಟಿಲೇಟರ್ ಗಳ ವ್ಯವಸ್ಥೆ ಮಾಡಲಾಗುತ್ತದೆ. 
 • ತರಕಾರಿಗಳನ್ನು ಗ್ರಾಮ ಮಟ್ಟದಲ್ಲಿ ವಿತರಣೆ ಮಾಡುವುದರ ಕುರಿತು ಕ್ರಮ ಕೈಗೊಳ್ಳಲಾಗಿದೆ.
 • ಕಾಫೀ ಮಾರಾಟ, ಗೊಬ್ಬರ ಖರೀದಿಗರ ವ್ಯವಸ್ಥೆ ಮಾಡಲಾಗುವುದು.
 • ಕಾಫೀ ಗ್ರೋವರ್ಸ್ ಸೊಸೈಟಿ ಗೆ ಡಿಸಿಸಿ ಬ್ಯಾಂಕ್ ಮೂಲಕ 1 ಕೋಟಿ ಸಹಾಯ ಧನ ಪಡೆದು, ರಿಂದ ಕಾಫೀ ಕೊಳ್ಳಲಾಗುವುದು. ಅರೇಬಿಕಾ 5000, ರೊಬಸ್ಟಾ 3000 ದರದಲ್ಲಿ ಖರೀದಿ.
 • ಶಿಕ್ಷಣ ಇಲಾಖೆ ಮೂಲಕ 21 ದಿನಗಳ  ಕಾಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕ ಮಕ್ಕಳಿಗೆ ಬಿಸಿ ಊಟ ವಿತರಣೆಗೆ ತಲಾ 2 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು.


ಸೋಂಕು ತಡೆಯಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳು:
ಅಂತರ ರಾಜ್ಯ ಗಡಿ ಬಂದ್ ಮಾಡಿರುವುದು.
ಹಾಸನ ಜಿಲ್ಲಾ ಗಡಿ ಬಂದ್ ಆಗಿರುವುದು, ಇದಕ್ಕೆಲ್ಲಾ ಜನರ ಸಹಕಾರ ಬಹುಮುಖ್ಯಾವಾಗಿದೆ ಎಂದು ಸಚಿವ ವಿ ಸೋಮಣ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಕೊಡಗು ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಕೊಡಗು  ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜೋಯ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪಾನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಿಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here