Sunday, June 26, 2022

Latest Posts

ಕೊಡಗಿನಲ್ಲಿ ಹುತ್ತರಿ ಸಂಭ್ರಮ: ‘ಪೊಲಿ ಪೊಲಿಯೇ ಬಾ’ ಘೋಷಣೆಯೊಂದಿಗೆ ಜಿಲ್ಲೆಯಾದ್ಯಂತ ವಿಶೇಷ ಪೂಜೆ

ಹೊಸದಿಗಂತ ವರದಿ, ಕೊಡಗು

ಕೊರೋನಾದ ಕರಿಛಾಯೆಯ ನಡುವೆಯೂ ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಸುಗ್ಗಿ ಹಬ್ಬ ಹು(ಪು)ತ್ತರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೋಮವಾರ ರಾತ್ರಿ ಕೊಡಗು ಜಿಲ್ಲೆಯಾದ್ಯಂತ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಳೆ-ಬೆಳೆ ದೇವರೆಂದೇ ಕರೆಯಲಾಗುವ ಪಾಡಿ ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಭತ್ತದ ಕದಿರು ತೆಗೆದಾದ ಬಳಿಕ ಜಿಲ್ಲೆಯ ವಿವಿಧ ದೇವಾಲಯಗಳ ಹಾಗೂ ಮನೆಮನೆಗಳ ಭತ್ತದ ಗದ್ದೆಗಳಲ್ಲಿ ಪೈರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ‘ಪೊಲಿ ಪೊಲಿಯೇ ಬಾ’ ಘೋಷಣೆಯೊಂದಿಗೆ ಕದಿರನ್ನು ದೇವಾಲಯಗಳಿಗೆ ಹಾಗೂ ಮನೆಗಳಿಗೆ ಕೊಂಡೊಯ್ಯಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರನ ಸನ್ನಿಧಿಯಲ್ಲಿಯೂ ಪೂಜೆ, ಪ್ರಾಥ೯ನೆ ನಡೆದು ದೇವಾಲಯದ ಭತ್ತದ ಗದ್ದೆಯಲ್ಲಿ ಹುತ್ತರಿಯನ್ನು ಸಾಂಪ್ರಾದಾಯಿಕವಾಗಿ ಆಚರಿಸಲಾಯಿತು. ಪುತ್ತರಿ ಪ್ರಯುಕ್ತ ದೇವಾಲಯದಲ್ಲಿ ತೆಪ್ಪೋತ್ಸವವೂ ಜರುಗಿತು.

ಪಟಾಕಿಗಳ ಸಿಡಿತವೂ ಹಬ್ಬಕ್ಕೆ ಕಳೆ ನೀಡಿತ್ತು. ಗ್ರಾಮೀಣ ಪ್ರದೇಶಗಳಲ್ಲಿಯೂ ಪಟಾಕಿಗಳ ಅಬ್ಬರ ಜೋರಾಗಿತ್ತು. ಹುತ್ತರಿ ಗೆಣಸು, ತಂಬಿಟ್ಟು ,ಅಡಿಕೆಪುಟ್ಟು, ಪಾಯಸ ಕೂಡ ಹಬ್ಬಕ್ಕೆ ಸವಿ ನೀಡಿತು. ಕೊಡವ ಸಮಾಜ ಮತ್ತು ಗೌಡ ಸಮಾಜಗಳಲ್ಲೂ ಕೂಡ ಹುತ್ತರಿ ಆಚರಣೆ ಕಂಡುಬಂತು.

ಕೋರೋನಾ ಹಿನ್ನಲೆಯಲ್ಲಿ ಮಂಕಾಗಿದ್ದ ಮನಸ್ಸುಗಳಿಗೆ ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿಯ ಆಚರಣೆ ಸಾಕಷ್ಟು ಸಂತಸ ನೀಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss