Tuesday, July 5, 2022

Latest Posts

ಕೊಡಗಿನ ತಲಕಾವೇರಿ ಬಳಿ ಪುಂಡರ ಪುಂಡಾಟ: ಪ್ರಶ್ನಿಸಿದವರಿಗೆ ತರಾಟೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಪ್ರಸಿದ್ಧ ಕ್ಷೇತ್ರ ಕೊಡಗಿನ ತಲಕಾವೇರಿ ಕ್ಷೇತ್ರದ ಸ್ವಾಗತ ಗೋಪುರದ ಬಳಿ ಯುವತಿಯರನ್ನು ಚುಡಾಯಿಸುತ್ತಿದ್ದ ಕೇರಳ ಮೂಲದ ಯುವಕರ ಗುಂಪೊಂದು, ಪ್ರಶ್ನಿಸಿದವರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಭಾನುವಾರ ಸಂಜೆ ಈ ಘಟನೆ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಕೇರಳ ಮೂಲದ ಈ ಯುವಕರು ಮಾಸ್ಕ್ ಕೂಡಾ ಧರಿಸಿರಲಿಲ್ಲ. ಅಲ್ಲದೆ ತಲಕಾವೇರಿ ಸ್ವಾಗತ ಗೋಪುರದ ಬಳಿ ನಿಂತು ಯುವತಿಯರನ್ನು ಚುಡಾಯಿಸಿದ್ದಾರೆ. ಈ ಬಗ್ಗೆ ಕ್ಷೇತ್ರದ ಗಾರ್ಡ್ ಇವರಿಗೆ ಎಚ್ಚರಿಕೆ ನೀಡಿದ್ದ ಸಂದರ್ಭ ಉದ್ಧಟತನ ತೋರಿದ ಗುಂಪು ಅವರ ಮೇಲೂ ಹರಿಹಾಯ್ದಿದ್ದಾರೆ. ಅಲ್ಲದೆ ಇದನ್ನು ಆಕ್ಷೇಪಿಸಿದ ಕೆಲವು ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss