ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಆರು ಮಂದಿ ಪೊಲೀಸ್ ಸಿಬ್ಬಂದಿ ಸಹಿತ ಒಂದೇ ದಿನ ಹೊಸದಾಗಿ 35 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 434ಕ್ಕೇ ಏರಿಕೆಯಾಗಿದ್ದರೆ, 289 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಒಟ್ಟು 136 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ವೀರಾಜಪೇಟೆಯ ವಡ್ಡರಮಾಡುವಿನ 36, 30 ಮತ್ತು 75ವರ್ಷದ ಮಹಿಳೆ, ಮಡಿಕೇರಿಯ ಗೌಳಿಬೀದಿಯಲ್ಲಿನ 56 ಹಾಗೂ ಪೊಲೀಸ್ ಕ್ವಾರ್ಟರ್ಸ್ನ 56 ವರ್ಷದ ಪೊಲೀಸ್ ಸಿಬ್ಬಂದಿ, ಕುಶಾಲನಗರದ ಹೆಬ್ಬಾಲೆ ಹುಲುಸೆಯ 75 ವರ್ಷದ ಮಹಿಳೆ,ವೀರಾಜಪೇಟಯ ಕರಡ ಗ್ರಾಮದ 26 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಿದ ಸಂದರ್ಭ ಮಡಿಕೇರಿ ಐಟಿಐ ಜಂಕ್ಷನ್ ಬಳಿಯ 32 ವರ್ಷದ ಮಹಿಳೆ, ವೀರಾಜಪೇಟೆಯ ಕಾಕೋಟುಪರಂಬುವಿನ 10ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಾಹ್ನ ಮತ್ತೆ 26 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ನಾಪೋಕ್ಲು ಚೋನಕೆರೆಯ 25 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆಯ 59 ಹಾಗೂ 28 ವರ್ಷದ ಪುರುಷರು, ಕಾನ್ವೆಂಟ್ ಜಂಕ್ಷನ್ನ 8 ವರ್ಷ ಬಾಲಕಿ ಹಾಗೂ 4 ವರ್ಷದ ಬಾಲಕ, ಗಣಪತಿ ಬೀದಿಯ 26 ವರ್ಷದ ಪುರುಷ, ಮಹದೇವಪೇಟೆಯ 73 ವರ್ಷದ ಪುರುಷ, ಮಡಿಕೇರಿ ಪೊಲೀಸ್ ವಸತಿ ಗೃಹದ 46 ವರ್ಷದ ಪುರುಷ ಸಿಬ್ಬಂದಿ,ಸುಬ್ರಹ್ಮಣ್ಯ ನಗರ ಪೊಲೀಸ್ ವಸತಿಗೃಹದ 41 ವರ್ಷದ ಪುರುಷ ಸಿಬ್ಬಂದಿ, ಮಡಿಕೇರಿ ತಾಲೂಕಿನ ಕಡಿಯತ್ತೂರಿನ 29 ವರ್ಷದ ಮಹಿಳೆ, ಮುತ್ತಪ್ಪ ದೇವಾಲಯ ಬಳಿಯ 32 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ವಿದೇಶ ಪ್ರಯಾಣದ ಹಿನ್ನೆಲೆ ಇರುವ ಬೋಯಿಕೇರಿಯ 32ವರ್ಷದ ಪುರುಷ ಹಾಗೂ 29 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯ 28 ವರ್ಷದ ಆರೋಗ್ಯ ಕಾರ್ಯಕರ್ತೆ, ವೀರಾಜಪೇಟೆ ವಡ್ಡರಮಾಡುವಿನ 36 ವರ್ಷದ ಪುರುಷ, ಗೋಣಿಕೊಪ್ಪದ 28 ಹಾಗೂ 29 ವರ್ಷದ ಪುರುಷರು, ಗೋಣಿಕೊಪ್ಪ ಕೈಕೇರಿ ಈರಣ್ಣ ಕಾಲೋನಿಯ 46 ವರ್ಷದ ಪುರುಷ, ನೇತಾಜಿ ಲೇಔಟ್ನ 47 ವರ್ಷದ ಮಹಿಳೆ, ಪಾಲಿಬೆಟ್ಟ ಕ್ರೈಗ್ಮೋರ್ ತೋಟದ 83ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರದ 32 ವರ್ಷದ ಆರೋಗ್ಯ ಕಾರ್ಯಕರ್ತೆ, , ಸುಂಟಿಕೊಪ್ಪ ಗುಂಡುಕುಟ್ಟಿಯ 35 ವರ್ಷದ ಪುರುಷ, ಸೋಮವಾರಪೇಟೆ ಶಾಂತಳ್ಳಿ ಗುಡ್ಡಳ್ಳಿಯ 48 ವರ್ಷದ ಪೊಲೀಸ್ ಪುರುಷ ಸಿಬ್ಬಂದಿ, ಕುಶಾಲನಗರದ 42 ವರ್ಷದ ಪುರುಷ, ಗುಡ್ಡೆಹೊಸೂರು ತೆಪ್ಪದಕಂಡಿಯ 79 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 19 ಕಂಟೈನ್ಮೆಂಟ್ ಪ್ರದೇಶಗಳನ್ನು ಹೊಸದಾಗಿ ತೆರೆಯಲಾಗಿದ್ದು ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 110ಕ್ಕೆ ಏರಿಕೆಯಾಗಿದೆ.