Sunday, July 3, 2022

Latest Posts

ಕೊಡಗು| ಕರಿಕೆಯಲ್ಲಿ ಡೆಂಗ್ಯು ಜ್ವರ ಪತ್ತೆ

ಕೊಡಗು: ಪ್ರತಿ ವರ್ಷ ಕರಿಕೆಯ ಜನರನ್ನು ಕಾಡುತ್ತಿರುವ ಮಾರಕ ಡೆಂಗ್ಯು ಈ ವರ್ಷವೂ ಕಾಣಿಸಿಕೊಂಡಿದೆ.

ಕರಿಕೆ ಚೆತ್ತುಕಾಯ ಡೊಡ್ಡಚೇರಿಯ ಐವತ್ತೈದು ವರ್ಷದ ಮಹಿಳೆಯೊಬ್ಬರಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ತ ಪರಿಶೀಲನೆ ನಡೆಸಿದಾಗ ಡೆಂಗ್ಯು ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದೀಗ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಈ ವರ್ಷ ಇದು ಪ್ರಥಮ ಡೆಂಗ್ಯು ಪ್ರಕರಣವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಅವರು ಡೆಂಗ್ಯು ಜ್ವರ ಪತ್ತೆಯಾದ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯಿಂದ ಮಾಹಿತಿ ಪಡೆದು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss