Thursday, August 18, 2022

Latest Posts

ಕೊಡಗು| ಕೃಷಿ ಚಟುವಟಿಕೆಗೆ ಪೂರಕವಾಗಿ ಹೆಚ್ಚುವರಿಯಾಗಿ ಯೂರಿಯಾ ಸೇರಿದಂತೆ ರಸಗೊಬ್ಬರ ಪೂರೈಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ಹೆಚ್ಚುವರಿಯಾಗಿ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರ ಪೂರೈಕೆಯಾಗಿದೆ.
ಜೂನ್ ತಿಂಗಳಲ್ಲಿ ಕೊಡಗು ಜಿಲ್ಲೆಗೆ ಎರಡು ಸಾವಿರ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಿದ್ದರು. ಆ ದಿಸೆಯಲ್ಲಿ ಹೆಚ್ಚುವರಿಯಾಗಿ ಯೂರಿಯಾ ರಸಗೊಬ್ಬರ ಸೇರಿದಂತೆ ಜಿಲ್ಲೆಗೆ ಅತ್ಯಗತ್ಯವಾಗಿ ಬೇಕಿರುವ ರಸಗೊಬ್ಬರವನ್ನು ಪೂರೈಸಲಾಗಿದೆ. ಕೊಡಗು ಜಿಲ್ಲೆಗೆ ವಾರ್ಷಿಕ ಹಂಗಾಮಿನಲ್ಲಿ 16,300 ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದ್ದು, ಇಲ್ಲಿಯವರೆಗೆ 7,929 ಮೆಟ್ರಿಕ್ ಟನ್ ಯುರಿಯಾ ಮಾರಾಟವಾಗಿದೆ. ಮುಕ್ತಾಯಗೊಂಡ ದಾಸ್ತಾನು 6,503 ಮೆಟ್ರಿಕ್ ಟನ್.
ಜೂನ್ ತಿಂಗಳಿನಲ್ಲಿ 2,000 ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದ್ದು, ಇಲ್ಲಿಯವರೆಗೆ 670 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಜಿಲ್ಲೆಗೆ ಯೂರಿಯಾ ಕೊರತೆಯಾಗದ ನಿಟ್ಟಿನಲ್ಲಿ ರಾಜ್ಯವು ಕ್ರಮವಾಗಿ ಹಾಸನ ಮತ್ತು ಮೈಸೂರು ಬಫರ್ ಸ್ಟಾಕ್‍ನಿಂದ ಕ್ರಮವಾಗಿ 200 ಮೆ.ಟನ್ ಮತ್ತು 500 ಮೆಟ್ರಿಕ್ ಟನ್ ಯೂರಿಯಾವನ್ನು ಎಂಸಿಎಫ್‍ಎಲ್ ಮೂಲಕ ಎರಡರಿಂದ ಮೂರು ದಿನಗಳಲ್ಲಿ ಜಿಲ್ಲೆಗೆ ಪೂರೈಸಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!