Saturday, August 13, 2022

Latest Posts

ಕೊಡಗು| ಕ್ಷುಲ್ಲಕ ಕಾರಣಕ್ಕೆ ಕೊಲೆ

ನಾಪೋಕ್ಲು(ಕೊಡಗು): ಇಲ್ಲಿಗೆ ಸಮೀಪದ ಕಿರುಂದಾಡು ಗ್ರಾಮದ ಎ.ರಾಧಾಕೃಷ್ಣ ಅವರ ಮನೆಯಲ್ಲಿ ವಾಸವಾಗಿದ್ದ ಸಿದ್ದು ಹಾಗೂ ಪಿರಿಯಾಪಟ್ಟಣದ ರಾಣಿಗೇಟ್ ನಿವಾಸಿ ಪುಷ್ಪ (40) ನಡುವೆ ಕಳೆದ ರಾತ್ರಿ ಕಲಹ ಏರ್ಪಟ್ಟಿದ್ದು, ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.
ಸಿದ್ದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಚೆರಿಯಪರಂಬುವಿನಲ್ಲಿ ವಾಸವಿರುವ ಮಗಳು ಚೈತ್ರಾ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ದಿನೇಶ್, ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಆರ್.ಕಿರಣ್, ಎಎಸ್‍ಐ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ನಾಪೋಕ್ಲು ಆಸ್ಪತ್ರೆಗೆ ತಂದ ಸಂದರ್ಭ ವೈದ್ಯಾಧಿಕಾರಿ ಡಾ. ಮದನ್ ಸಂಶಯಗೊಂಡು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss