Tuesday, June 28, 2022

Latest Posts

ಕೊಡಗು| ಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಗೊನೆ ಬಿಟ್ಟ ನೇಂದ್ರ ಬಾಳೆ ತೋಟ

ನಾಪೋಕ್ಲು (ಕೊಡಗು): ಸುಮಾರು ೮ ಎಕರೆ ಗದ್ದೆಯನ್ನು ಗುತ್ತಿಗೆ ಪಡೆದು ಬೆಳೆದಿದ್ದ ನೇಂದ್ರ ಬಾಳೆಯ ತೋಟ ಗುರುವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ನೆಲಕಚ್ಚಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಕೇರಳ ಮೂಲದ ನೌಷದ್ ಮತ್ತು ಸಮೀರ್ ಎಂಬವರು ಇಲ್ಲಿಗೆ ಸಮೀಪದ ಬೇತು ಗ್ರಾಮದಲ್ಲಿ ಕೊಂಡಿರ ಕುಟುಂಬದವರ ೮ ಎಕರೆ ಗದ್ದೆಯನ್ನು ನೇಂದ್ರ ಬಾಳೆ ನೆಡುವುದಕ್ಕಾಗಿ ಲೀಸ್‌ಗೆ ಪಡೆದು ಕೃಷಿ ಮಾಡಿದ್ದರು.
ಪ್ರಸಕ್ತ ಅದರಲ್ಲಿ ಬಾಳೆ ಗೊನೆ ಬಿಟ್ಟಿದ್ದು, ಗುರುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು ೨ ಎಕರೆ ಫಸಲು ಬಂದ ಬಾಳೆ ಗಿಡಗಳು ಸಂಪೂರ್ಣ ನೆಲ ಕಚ್ಚಿದೆ. ಇದರಿಂದ ಅಂದಾಜು ೩ ಲಕ್ಷ ನಷ್ಟ ಸಂಭವಿಸಿದೆ.
ವಿಪರ್ಯಾಸವೆಂದರೆ ಇಲ್ಲಿ ಬಾಳೆ ತೋಟದ ಕೆಲಸ ಮುಗಿದ ಮೇಲೆ ನೌಷದ್ ಮತ್ತು ಸಮೀರ್ ಕೇರಳಕ್ಕೆ ತೆರಳಿದ್ದು, ಅದೇ ಸಂದರ್ಭ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಅವರು ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ. ತೋಟವನ್ನು ನೋಡಿಕೊಳ್ಳುವಂತೆ ಸ್ಥಳೀಯರಿಗೆ ಹೇಳಿದ್ದರೆನ್ನಲಾಗಿದೆ. ಆದರೆ ಇದೀಗ ಬಾಳೆ ತೋಟ ನೆಲಕಚ್ಚಿದ್ದು, ಬಾಳೆ ನೆಡಲು ಹೂಡಿದ ಬಂಡವಾಳಕ್ಕೂ ಸಂಚಕಾರ ಒದಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss