ಕೊಡಗು | ಗೋಣಿಕೊಪ್ಪಲು ಸೂಪರ್ ಮಾರ್ಕೆಟ್ ವಿರುದ್ಧ ಕಾನೂನು ಕ್ರಮ

0
66

ಮಡಿಕೇರಿ: ನ್ಯಾಯ ಬೆಲೆ ಅಂಗಡಿಯ ಅಕ್ಕಿಯನ್ನು ಖರೀದಿಸಿ, 1965 ಅಗತ್ಯ ವಸ್ತು ಕಾಯ್ಧೆ ದುರ್ಬಳಕೆ ಹಿನ್ನೆಲೆ ಗೋಣಿಕೊಪ್ಪಲು ಸಿ.ಎಚ್.ಸೂಪರ್ ಮಾರ್ಕೆಟ್ ವಿರುದ್ಧ ವೀರಾಜಪೇಟೆ ಆಹಾರ ನಿರೀಕ್ಷಕ ಚಂದ್ರ ನಾಯಕ್ ಅವರು‌ ಮೊಕದ್ದಮೆ ದಾಖಲಿಸಿದ್ದಾರೆ.
ಶುಕ್ರವಾರ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾದ ಸುಮಾರು‌ 61 ಕೆ.ಜಿ.ಅಕ್ಕಿಯನ್ನು‌ ರೂ.18 ರಂತೆ ಕೆ.ಜಿ.ಯೊಂದಕ್ಕೆ ಖರೀದಿಸಲಾಗಿದ್ದು 1955 ಅಗತ್ಯ ವಸ್ತು ಕಾಯ್ಧೆ ಅನ್ವಯ ಇಲ್ಲಿನ ಸಿ.ಹೆಚ್.ಸೂಪರ್ ಮಾರ್ಕೆಟ್ ನ ಆಸೀಫ್ ಹಾಗೂ ಶಬೀರ್ ಎಂಬವರ ವಿರುದ್ಧ ಗೋಣಿಕೊಪ್ಪಲು‌ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಮಾಯಮುಡಿಯಿಂದ ಕಾರೊಂದರಲ್ಲಿ ಬಂದ ವ್ಯಕ್ತಿಗಳಿಂದ ನ್ಯಾಯ ಬೆಲೆ ಅಂಗಡಿ ಅಕ್ಕಿ ಖರೀದಿಸಿ, ಇತರೆ ದಿನಸಿ ವಸ್ತುಗಳನ್ನು ನೀಡಿದ ಸಂದರ್ಭ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್ ಅವರಿಗೆ ದೊರೆತ ಮಾಹಿತಿ ಮೇರೆ ಗೋಣಿಕೊಪ್ಪಲು ಗ್ರಾ.ಪಂ.ಪಿಡಿಓ‌ಶ್ರೀನಿವಾಸ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನಷ್ಟೇ ಈ ಬಗ್ಗೆ ತನಿಖೆ ಕೈಗೊಳ್ಳ ಬೇಕಾಗಿದೆ.

LEAVE A REPLY

Please enter your comment!
Please enter your name here