Monday, July 4, 2022

Latest Posts

ಕೊಡಗು| ಗ್ರಾ.ಪಂ. ಚುನಾವಣೆಗೆ ಸಿದ್ಧತೆ: ನಾಳೆ ಆಯೋಗದಿಂದ ವಿಡಿಯೋ ಕಾನ್ಫರೆನ್ಸ್

ಹೊಸ ದಿಗಂತ ವರದಿ ಮಡಿಕೇರಿ:

ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಚುನಾವಣೆಯ ಕಾವು ಆರಂಭವಾಗಿದೆ.

ಕಳೆದ ಜೂನ್ – ಜುಲೈ ತಿಂಗಳಿನಲ್ಲಿ ಗ್ರಾ.ಪಂ.ಗಳ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಆರಂಭಗೊಂಡಿತ್ತಾದರೂ, ಕೊರೋನಾ ಕಾರಣದಿಂದ ಚುನಾವಣೆ  ನಡೆಸುವುದು ಸದ್ಯಕ್ಕೆ ಸಾಧ್ಯವಾಗದು ಎಂಬ  ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದಿತ್ತು.

ಆದರೆ ಇದೀಗ ರಾಜ್ಯ ಉಚ್ಛ ನ್ಯಾಯಾಲಯ ಚುನಾವಣೆಗೆ ಸಂಬಂಧಿಸಿದ ಪ್ರಕ್ರಚುನಾವಣೆಗಸುವಂತೆ ಸೂಚನೆ ನೀಡಿದ್ದು, ಚುನಾವಣೆಯಲ್ಲಿ  ಸ್ಪರ್ಧಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳಲ್ಲೂ ಸಂಚಲನ ಸೃಷ್ಟಿಯಾಗಿದೆ.

ಮಂಗಳವಾರ ವೀಡಿಯೋ ಕಾನ್ಫರೆನ್ಸ್:ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ನ.17 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ  ಸಮಾಲೋಚನೆ ನಡೆಸಲಿದೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಆಯೋಗ ನೀಡುವ ಸಲಹೆ – ಸೂಚನೆಗಳಂತೆ ಚುನಾವಣೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರ ಪಟ್ಟಿ, ಮೀಸಲಾತಿ ನಿಗದಿಯಂತಹ ವಿಚಾರಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದಂತೆ ಚುನಾವಣೆ ನಡೆಸುವ ಕುರಿತು ಅಗತ್ಯಗಳಾದ ಮತಗಟ್ಟೆಗಳು, ಕರ್ತವ್ಯಕ್ಕೆ ನಿಯೋಜಿಸಬೇಕಾದ ಚುನಾವಣಾ ಅಧಿಕಾರಿಗಳು, ಬಂದೋಬಸ್ತ್ ಇನ್ನಿತರ ಪ್ರಕ್ರಿಯೆಗಳ ಬಗ್ಗೆ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆದ ಮತಗಟ್ಟೆಗಳೇ ಬಹುತೇಕ ಗ್ರಾ.ಪಂ. ಚುನಾವಣೆಯಲ್ಲೂ  ಕಾರ್ಯನಿರ್ವಹಿಸಲಿವೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ 101 ಪಂಚಾಯಿತಿಗಳು: ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಬಗ್ಗೆ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅನೀಸ್ ಕಣ್ಮಣಿ ಜಾಯ್  ಅವರು ತಿಳಿಸಿದರು. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ  ನಡೆದ ಮತಗಟ್ಟೆಗಳೇ ಬಹುತೇಕ ಗ್ರಾ.ಪಂ. ಚುನಾವಣೆ ಯಲ್ಲೂ  ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿಯಿತ್ತರು.

ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಕಸರತ್ತು ಆರಂಭಿಸಿದ್ದಾರೆ. ಇದು ರಾಜಕೀಯ ನೆಲೆಯಲ್ಲಿ ನಡೆಯುವ ಚುನಾವಣೆಯಲ್ಲದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಕ್ಷಗಳ ಬೆಂಬಲದಡಿಯಲ್ಲೇ ಅಭ್ಯರ್ಥಿಗಳು ಹೆಚ್ಚಾಗಿ ಕಣಕ್ಕಿಳಿಯುವುದರಿಂದ ರಾಜಕೀಯ ಪಕ್ಷಗಳಲ್ಲೂ ಇದೀಗ ಚುನಾವಣೆಯ ಕಾವು ಏರತೊಡಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss