Saturday, August 13, 2022

Latest Posts

ಕೊಡಗು | ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ 96 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶ

ಮಡಿಕೇರಿ: ನಗರದ ಹೊರವಲಯದ ಇಬ್ನಿವಳವಾಡಿ ಗ್ರಾಮದ ಎಂ.ಪಿ.ಶಶಿಧರ್ ಎಂಬವರ ಮನೆಯ ಲಾಕರ್ ಒಡೆದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಶಿಧರ್ ಅವರ ಮನೆಯ ಲಾಕರ್‌ನ್ನು ಒಡೆದು ೯ಗ್ರಾಂ.ನ ಒಂದು ಚಿನ್ನದ ಸರ, ೪ ಗ್ರಾಂ.ನ ಒಂದು ಚಿನ್ನದ ಸರ ಹಾಗೂ ಪೆಂಡೆಂಟ್, ಮೂರು ಚಿಕ್ಕ ಚಿನ್ನದ ಉಂಗುರ ಹಾಗೂ ಒಂದು ದೊಡ್ಡ ಉಂಗುರ ಸೇರಿ ೪ ಗ್ರಾಂ. ೪ ಗ್ರಾಂ.ನ ಒಂದು ಜೊತೆ ಚಿನ್ನದ ಓಲೆ ಹಾಗೂ ಹ್ಯಾಂಗಿಂಗ್ಸ್ ಸೇರಿದಂತೆ ಸುಮಾರು ೭೩ ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನು ಮೇ ೧೩ರಂದು ಕಳವು ಮಾಡಲಾಗಿತ್ತು.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸುಮನ್ ಡಿ ಪೆನ್ನೆಕರ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ .ಬಿ.ಪಿ. ದಿನೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ .ಸಿ.ಎನ್ ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ ಚಂದ್ರಶೇಖರ್, ಸಿಬ್ಬಂದಿಗಳಾದ ತೀರ್ಥಕುಮಾರ್, ಪ್ರೇಮ್‌ಕುಮಾರ್, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್, ಚಾಲಕರಾದ ಪ್ರವೀಣ್‌ಕುಮಾರ್ ಹಾಗೂ ನಾಗರಾಜು ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು ಇದೀಗ ಆರೋಪಿ, ಇಬ್ನಿವಳವಾಡಿ ಗ್ರಾಮದ ಮೋನಿಶ್(೧೮) ಎಂಬಾತನನ್ನು ಬಂಧಿಸಿ ಆತನಿಂದ ಒಟ್ಟು ೯೬,೫೦೦ ರೂ. ಮೌಲ್ಯದ ೩೧ ಗ್ರಾಂ. ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss