Wednesday, August 10, 2022

Latest Posts

ಕೊಡಗು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ 23 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಮತ್ತೆ 23 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ವೀರಾಜಪೇಟೆ ಹೆಗ್ಗಳ ಬುದಿಮಾಳ ಗ್ರಾಮದ 23 ವರ್ಷದ ಮಹಿಳೆ, ಮಡಿಕೇರಿ ಬೊಯಿಕೇರಿಯ ನೀರುಕೊಲ್ಲಿ ಗ್ರಾಮದ ಇಬ್ನಿವಳವಾಡಿಯ 28 ವರ್ಷದ ಪುರುಷ, ಕುಶಾಲನಗರ ಬಲಮುರಿ ದೇವಾಲಯ ರಸ್ತೆಯ ನಾಗೇಗೌಡ ಬಡಾವಣೆಯ 53 ವರ್ಷದ ಮಹಿಳೆ, ಮಡಿಕೇರಿ ಜಯನಗರದ ಶಾಂತಿನಿಕೇತನ ರಸ್ತೆಯ 54 ವರ್ಷದ ಪುರುಷ, ಸೋಮವಾರಪೇಟೆ ಕೊಡ್ಲೀಪೇಟೆಯ ಬೆಂಬಳೂರುವಿನ ಸರ್ಕಾರಿ ಶಾಲೆ ಸಮೀಪದ 28 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಸೋಮವಾರಪೇಟೆ ದೊಡ್ಡ ಕೊಡ್ಲಿಯ 21 ವರ್ಷದ ಮಹಿಳೆ, ಯಡವನಾಡುವಿನ 96 ವರ್ಷದ ಮಹಿಳೆ, ಕುಶಾಲನಗರ ಕರಿಯಪ್ಪ ಬಡಾವಣೆಯ 40 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕಿ, ಸೋಮವಾರಪೇಟೆ ಯಡೂರು ಮಾವಿನಕಟ್ಟೆಯ 49 ಮತ್ತು 30 ವರ್ಷದ ಮಹಿಳೆಯರಲ್ಲೂ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ಚೌಡ್ಲುವಿನ ಜೂನಿಯರ್ ಕಾಲೇಜು ಸಮೀಪದ 45 ವರ್ಷದ ಪುರುಷ, 60 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕಿ, ಕುಶಾಲನಗರ ಕರಿಯಪ್ಪ ಬಡಾವಣೆಯ 4ನೇ ಬ್ಲಾಕಿನ 70 ವರ್ಷದ ಮಹಿಳೆ, ಸುಂಟಿಕೊಪ್ಪ 7ನೇ ಹೊಸ ಕೋಟೆಯ ಅಂದಗೋವೆ ಅಂಚೆ ಕಚೇರಿ ಸಮೀಪದ 27 ವರ್ಷದ ಮಹಿಳೆ, ಸೋಮವಾರಪೇಟೆ ರೇಂಜರ್ ಬ್ಲಾಕಿನ 67 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಕುರ್ಚಿಯ 25 ವರ್ಷದ ಪುರುಷ, ಹಾಸನದ ಅರಕಲಗೂಡುವಿನ 48 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ, ವೀರಾಜಪೇಟೆ ಬಿಟ್ಟಂಗಾಲದ ರೋಟರಿ ಶಾಲೆ ಸಮೀಪದ 41 ವರ್ಷದ ಪುರುಷ, ಮಡಿಕೇರಿ ಡೈರಿ ಫಾರಂ 2ನೇ ಹಂತದ 68 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2149ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1720 ಮಂದಿ ಗುಣಮುಖರಾಗಿದ್ದಾರೆ. 399 ಸಕ್ರಿಯ ಪ್ರಕರಣಗಳಿದ್ದು, 30 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 336 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss