ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 4 ಹಾಗೂ ಮಧ್ಯಾಹ್ನ 21 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.
ಮಡಿಕೇರಿಯ ಆಜಾದ್ ನಗರದ 75 ಮತ್ತು 33 ವರ್ಷದ ಪುರುಷ ಹಾಗೂ 27 ವರ್ಷದ ಮಹಿಳೆ ಮತ್ತು ವೀರಾಜಪೇಟೆಯ ಬೆಕ್ಕೆಸೊಡ್ಲೂರುವಿನ 45 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಬುಧವಾರ ಮಧ್ಯಾಹ್ನ ಕುಶಾಲನಗರದ ವಾಸವಿ ಮಹಲ್ ಬಳಿಯ 47 ವರ್ಷದ ಮಹಿಳೆ, ಎಚ್.ಆರ್.ಪಿ ಕಾಲೋನಿಯ 45 ವರ್ಷದ ಪುರುಷ, ಮುಳ್ಳುಸೋಗೆಯ ಕುವೆಂಪು ಬಡಾವಣೆಯ 80 ವರ್ಷದ ಪುರುಷ, ಸೋಮವಾರಪೇಟೆ ದೊಡ್ಡಮಳ್ತೆಯ 23 ವರ್ಷದ ಪುರುಷ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 26 ಮತ್ತು 24 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆಯ ಪೊಲೀಸ್ ವಸತಿ ಗೃಹದ 27 ವರ್ಷದ ಪುರುಷ, ಚೆಟ್ಟಳ್ಳಿ ಬಳಿಯ ಚೆಟ್ಟಳ್ಳಿ ಫಾರಂನ 24 ವರ್ಷದ ಮಹಿಳೆ, 2 ಮತ್ತು 3 ವರ್ಷದ ಬಾಲಕಿಯರು, ನೆಲ್ಲಿಹುದಿಕೇರಿಯ 28 ವರ್ಷದ ಪುರುಷ ಮತ್ತು 49 ವರ್ಷದ ಮಹಿಳೆ, ಸೋಮವಾರಪೇಟೆ ಶನಿವಾರಸಂತೆಯ ಹುಲುಸೆ ಮೂಡರಹಳ್ಳಿಯ 49 ವರ್ಷದ ಪುರುಷ, ಸೋಮವಾರಪೇಟೆಯ ನಾರೂರು ಗ್ರಾಮದ 55 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ತೊರೆನೂರುವಿನ 24 ವರ್ಷದ ಪುರುಷ, ಕುಶಾಲನಗರ ಹೆಬ್ಬಾಲೆಯ ಬಾರ್ ರಸ್ತೆಯ 17 ವರ್ಷದ ಮಹಿಳೆ, ಮಡಿಕೇರಿ ತಾಲೂಕಿನ ಸಂಪಾಜೆಯ 41 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಮಡಿಕೇರಿ ದಾಸವಾಳ ರಸ್ತೆಯ 51 ವರ್ಷದ ಮಹಿಳೆ, ಮಹದೇವಪೇಟೆಯ ಮಖಾನ್ ರಸ್ತೆಯ 48 ಮತ್ತು 21 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದ್ದು, ಈ ಪೈಕಿ 342 ಮಂದಿ ಗುಣಮುಖರಾಗಿದ್ದಾರೆ. 233 ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಮಡಿಕೇರಿಯ ಆಜಾದ್ ನಗರ ಮಸೀದಿ ಬಳಿ ಹಾಗೂ ಬೆಕ್ಕೆಸೊಡ್ಲೂರು ಕ್ಲಬ್ ಬಳಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಈ ಹಿಂದೆ ತೆರೆಯಲಾಗಿದ್ದ ಹೆಗ್ಗಳ ನಿರ್ಮಲಗಿರಿ, ಹುದಿಕೇರಿಯ ಹೈಸೊಡ್ಲೂರು, ಮಡಿಕೇರಿ ಜಯನಗರದ ಒಂದನೇ ಬ್ಕಾಕ್, ಗೋಣಿಕೊಪ್ಪದ ಜೋಡುಬೀಟಿ, ಮುತ್ತಾರುಮುಡಿಯ ಬೈಲೆಬಾಣೆ, ಮಡಿಕೇರಿಯ ದಾಸವಾಳ ರಸ್ತೆ, ವೀರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು, ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ ಹಾಗೂ ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 157 ರಷ್ಟಿದೆ ಎಂದು ಅವರು ಹೇಳಿದ್ದಾರೆ.