Tuesday, August 16, 2022

Latest Posts

ಕೊಡಗು ಜಿಲ್ಲೆಯಲ್ಲಿ ಭಾನುವಾರ 58 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢ, ಒಂದು ಸಾವು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 28 ಹಾಗೂ ಮಧ್ಯಾಹ್ನ 30 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2622ರಷ್ಟಾಗಿದ್ದು, ಈ ಪೈಕಿ 2120 ಮಂದಿ ಗುಣಮುಖರಾಗಿದ್ದಾರೆ. 468 ಸಕ್ರಿಯ ಪ್ರಕರಣಗಳಿದ್ದು, 34 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 403 ಆಗಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರಪೇಟೆ ಮಾದಾಪುರ ಬಿಳಿಗೇರಿ ಗ್ರಾಮದ 66 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿ ವಿನಾಯಕ ಬಡಾವಣೆಯ 46 ವರ್ಷದ ಮಹಿಳೆ, ಮಡಿಕೇರಿ ಕಡಗದಾಳು ಭಗವತಿ ದೇವಾಲಯ ಸಮೀಪದ 70 ವರ್ಷದ ಪುರುಷ, ಮಡಿಕೇರಿ ಹಾಕಿ ಗ್ರೌಂಡ್ ಎದುರಿನ 47 ಮತ್ತು 39 ವರ್ಷದ ಪುರುಷರು, ಸಿದ್ದಾಪುರ ಕರಡಿಗೋಡು ಆರೆಂಜ್ ಕೌಂಟಿಯ 34, 39, 33, 19 ವರ್ಷದ ಪುರುಷರು, 28 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಭಾಗಮಂಡಲ ಆಟೋ ನಿಲ್ದಾಣ ಸಮೀಪದ 39 ವರ್ಷದ ಪುರುಷ, ಸೋಮವಾರಪೇಟೆ ಕೊಡ್ಲಿಪೇಟೆಯ ಮುಖ್ಯ ರಸ್ತೆಯ 21 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ, ಹೆಬ್ಬಾಲೆ ದೇವಸ್ಥಾನ ರಸ್ತೆಯ 27 ವರ್ಷದ ಮಹಿಳೆ, ಕುಶಾಲನಗರ ಹೌಸಿಂಗ್ ಬೋರ್ಡ್ ಆರ್.ಆರ್.ಆರ್ ಲೇಔಟ್‍ನ 67 ವರ್ಷದ ಮಹಿಳೆ, ಆಲೂರು ಸಿದ್ದಾಪುರ ಚಿಕ್ಕಕಣಗಾಲದ 28 ಮತ್ತು 55 ವರ್ಷದ ಪುರುಷರು, ಕುಶಾಲನಗರ ಮಾರುತಿ ಲೇಔಟ್‍ನ 51 ವರ್ಷದ ಪುರುಷ, ಮಡಿಕೇರಿ ಓಂಕಾರೇಶ್ವರ ದೇವಾಲಯ ರಸ್ತೆಯ ಬ್ರಾಹ್ಮಣರ ಬೀದಿಯ 33 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ, ಮಡಿಕೇರಿ ಕಾರಾಗೃಹ ವಸತಿಗೃಹದ 38 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ಸೋಮವಾರಪೇಟೆ ಅಬ್ಬೂರುಕಟ್ಟೆ ಆಡಿನಾಡೂರು ಗ್ರಾಮದ 60 ವರ್ಷದ ಮಹಿಳೆ ಮತ್ತು 68 ವರ್ಷದ ಪುರುಷ, ವೀರಾಜಪೇಟೆ ಟಿ.ಶೆಟ್ಟಿಗೇರಿಯ 74 ಮತ್ತು 54 ವರ್ಷದ ಮಹಿಳೆಯರು, ವೀರಾಜಪೇಟೆ ಮೀನುಪೇಟೆಯ ವಿನಾಯಕ ಶಾಲೆ ಹಿಂಭಾಗದ 45 ವರ್ಷದ ಪುರುಷ ಗೋಣಿಕೊಪ್ಪ ಎಚ್.ಸಿ ಪುರ ಅಂಗನವಾಡಿ ಸಮೀಪದ 36 ವರ್ಷದ ಪುರುಷ, ನೆಲ್ಲಿಹುದಿಕೇರಿ ಸೇತುವೆ ಸಮೀಪದ 35 ವರ್ಷದ ಪುರುಷ, ಹಾಸನದ ಕೊಣನೂರಿನ 32 ವರ್ಷದ ಮಹಿಳೆ, ಸೋಮವಾರಪೇಟೆ ಬಿಳಿಗೇರಿ ಸೇತುವೆ ಸಮೀಪದ 60 ವರ್ಷದ ಪುರುಷ, ಮಡಿಕೇರಿ ಪುಟಾಣಿನಗರ ಚಾಮರಾಜ ಬಂಗಲೆ ಸಮೀಪದ 56 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ವೀರಾಜಪೇಟೆ ಆರೆಂಜ್ ಕೌಂಟಿಯ ಕರಡಿಗೋಡು ಪೈಸಾರಿಯ 26 ವರ್ಷದ ಪುರುಷ, ನೆಲ್ಲಿಹುದಿಕೇರಿ ಎಂಜಿ ಕಾಲೋನಿಯ 31 ವರ್ಷದ ಪುರುಷ, ಮಡಿಕೇರಿ ದೇವರಕೊಲ್ಲಿಯ ಗ್ರೀನ್ ಕೂರ್ಗ್ ಎಸ್ಟೇಟ್‍ನ 47, 50, 60 ವರ್ಷದ ಮಹಿಳೆ, 47, 18, 19 ವರ್ಷದ ಪುರುಷರು, 11, 4 ವರ್ಷದ ಬಾಲಕಿಯರು, 35, 19,46 ವರ್ಷದ ಮಹಿಳೆ, 11 ವರ್ಷದ ಬಾಲಕ, 62 ,66 ವರ್ಷದ ಮಹಿಳೆಯರು ಮತ್ತು 14 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಮಡಿಕೇರಿ ಮೂರ್ನಾಡುವಿನ 57 ವರ್ಷದ ಪುರುಷ, ಹಾಸನ ಕೊಣನೂರುವಿನ 65 ವರ್ಷದ ಪುರುಷ, ಮಡಿಕೇರಿ ಮರಗೋಡು ಗ್ರಾಮದ ಕಟ್ಟೆಮಾಡುವಿನ 31 ವರ್ಷದ ಪುರುಷ, ಭಾಗಮಂಡಲ ಆಟೋ ನಿಲ್ದಾಣ ಸಮೀಪದ 3 ವರ್ಷದ ಬಾಲಕ, ಮರಗೋಡು ಕತ್ತಲೆಕಾಡುವಿನ 45 ವರ್ಷದ ಪುರುಷ, ಮಡಿಕೇರಿ ಸುದರ್ಶನ ಅತಿಥಿ ಗೃಹ ಸಮೀಪದ 39 ವರ್ಷದ ಮಹಿಳೆ, ಮಡಿಕೇರಿ ಆಜಾದ್ ನಗರ ಲತೀಫ್ ಸ್ಟೋರ್ ಹಿಂಭಾಗದ 28 ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ, ವೀರಾಜಪೇಟೆ ಕೋಣನಕಟ್ಟೆ ಗ್ರಾಮದ 56 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss