ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 12 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಕುಶಾಲನಗರ ಡ್ರೀಮ್ ಲೇಔಟ್ ನ ನಿಸರ್ಗಧಾಮ ಬಳಿಯ 30ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಶ್ರೀಮಂಗಲದ ಕೃಷ್ಣ ದೇವಾಲಯ ಬಳಿಯ 19ಮತ್ತು 49 ವರ್ಷದ ಪುರುಷರು, ವೀರಾಜಪೇಟೆ ಶ್ರೀಮಂಗಲದ 76 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ಮಡಿಕೇರಿ ಎಮ್ಮೆಮಾಡುವಿನ ಪಡಿಯಾಣಿ ಮಸೀದಿ ಬಳಿಯ 58ವರ್ಷದ ಪುರುಷ,ಕುಶಾಲನಗರ ಸೋಮೇಶ್ವರ ಬಡಾವಣೆಯ 45, 24 ಮತ್ತು 25 ವರ್ಷದ ಮಹಿಳೆಯರು,ಕುಶಾಲನಗರ ಬಸಪ್ಪ ಲೇಔಟ್ ನ 8ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಶಾಲನಗರ ಮುಳ್ಳುಸೋಗೆಯ ಶಕ್ತಿ ಬಡಾವಣೆಯ 41 ವರ್ಷದ ಪುರುಷ,ಕುಶಾಲನಗರ ಮುಳ್ಳುಸೋಗೆಯ 1ನೇ ಬ್ಲಾಕ್ ನ 70ವರ್ಷದ ಮಹಿಳೆ,ಕುಶಾಲನಗರ ನಿಜಾಮುದ್ದೀನ್ ಲೇಔಟ್ ನ 44ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1232ರಷ್ಟಾಗಿದ್ದು, ಈ ಪೈಕಿ 953 ಮಂದಿ ಗುಣಮುಖರಾಗಿದ್ದಾರೆ. 263 ಸಕ್ರಿಯ ಪ್ರಕರಣಗಳಿದ್ದು, 16ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 254 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.